ಶೇ.100 ರಷ್ಟು ಮುಸ್ಲಿಂ ಮತದಾರರೇ ಇರುವ ಗೋಧ್ರಾ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಮಹಿಳೆ ಗೆಲುವು; ಕಾಂಗ್ರೆಸ್ ಗೆ ಮುಖಭಂಗ!
ಕೋಮು ಇತಿಹಾಸದ ಹಿನ್ನೆಲೆಯಲ್ಲಿ ಆಗಾಗ ಸುದ್ದಿಯಾಗುವ ಗುಜರಾತ್ ನ ಗೋದ್ರಾದಲ್ಲಿ, 2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಸಾಮಾಜಿಕ ಸಾಮರಸ್ಯದ ಪ್ರಬಲ ಸಂದೇಶವನ್ನು ರವಾನಿಸಿದೆ.

ಅಹ್ಮದಾಬಾದ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ 2026ರಲ್ಲಿ ಅಚ್ಚರಿ ಫಲಿತಾಂಶವೊಂದು ಹೊರಬಿದ್ದಿದ್ದು, ಶೇ.100 ರಷ್ಟು ಮುಸ್ಲಿಂ ಮತದಾರರೇ ಇರುವ ಗೋಧ್ರಾ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.
ಹೌದು.. ಕೋಮು ಇತಿಹಾಸದ ಹಿನ್ನೆಲೆಯಲ್ಲಿ ಆಗಾಗ ಸುದ್ದಿಯಾಗುವ ಗುಜರಾತ್ ನ ಗೋದ್ರಾದಲ್ಲಿ, 2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಸಾಮಾಜಿಕ ಸಾಮರಸ್ಯದ ಪ್ರಬಲ ಸಂದೇಶವನ್ನು ರವಾನಿಸಿದೆ.
ಶೇ.100 ರಷ್ಟು ಮುಸ್ಲಿಂ ಮತದಾರರೇ ಇರುವ ಗೋಧ್ರಾ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.
ಗೋದ್ರಾ ನಗರಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ವಾರ್ಡ್ ಸಂಖ್ಯೆ 7ರಿಂದ ಪಕ್ಷೇತರ ಹಿಂದೂ ಮಹಿಳಾ ಅಭ್ಯರ್ಥಿ ಅಪೇಕ್ಷಾಬೆನ್ ನೈನೇಷ್‌ಭಾಯಿ ಸೋನಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ವಿಶೇಷವೆಂದರೆ, ಈ ಕ್ಷೇತ್ರದಲ್ಲಿ ಶೇ. 100ರಷ್ಟು ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ರಾಜಕೀಯ ನಿರೂಪಣೆಯನ್ನೇ ಬದಲಿಸಿದ ಫಲಿತಾಂಶ
ಅಪೇಕ್ಷಾಬೆನ್ ಸೋನಿ ಅವರ ಈ ಗೆಲುವು ಈ ಭಾಗದ ರಾಜಕೀಯ ನಿರೂಪಣೆಯನ್ನೇ ಬದಲಿಸಿದ್ದು, ವಾರ್ಡ್ ಸಂಖ್ಯೆ 7ರಲ್ಲಿ ಅವರು ನೋಂದಾಯಿತ ಮತದಾರರಲ್ಲದಿದ್ದರೂ ಸಹ, ಸ್ಥಳೀಯ ನಿವಾಸಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಸ್ಲಿಂ ಮತದಾರರು ಸಾಂಪ್ರದಾಯಿಕ ಧರ್ಮ ಮತ್ತು ಜಾತಿ ಆಧಾರಿತ ಮತದಾನದ ಮಾದರಿಗಳನ್ನು ಬದಿಗಿಟ್ಟು, ಸ್ಥಳೀಯ ಆಡಳಿತಕ್ಕೆ ಸೂಕ್ತವೆಂದು ಕಂಡುಬಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಈ ಐತಿಹಾಸಿಕ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸ ನಿರ್ಮಾಣ
ಈ ಫಲಿತಾಂಶವನ್ನು ಗೋದ್ರಾದ ರಾಜಕೀಯ ಇತಿಹಾಸದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದ್ದು, ಇದು ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಅಪರೂಪದ ಉದಾಹರಣೆಯಾಗಿದೆ.
ಸಂಪೂರ್ಣ ಮುಸ್ಲಿಂ ಮತದಾರರಿರುವ ವಾರ್ಡ್‌ನಲ್ಲಿ ಹಿಂದೂ ಮಹಿಳೆಯನ್ನು ಭಾರಿ ಬಹುಮತದಿಂದ ಆರಿಸುವ ಮೂಲಕ, ಗೋದ್ರಾದ ಮತದಾರರು ಕೋಮು ವಿಭಜನೆಗಿಂತ ವೈಯಕ್ತಿಕ ಅರ್ಹತೆ ಮತ್ತು ಸ್ಥಳೀಯ ನಂಬಿಕೆಗೆ ಆದ್ಯತೆ ನೀಡಿದ್ದಾರೆ.
ಬಿಜೆಪಿ ಬಿಗಿ ಹಿಡಿತ, ಕಾಂಗ್ರೆಸ್ ಗೆ ಮುಖಭಂಗ
ಇನ್ನು ಗುಜರಾತ್‌ನ ಒಟ್ಟಾರೆ ಚುನಾವಣಾ ಫಲಿತಾಂಶದತ್ತ ಗಮನ ಹರಿಸುವುದಾದರೆ, ಬಿಜೆಪಿಯು ರಾಜ್ಯದ ಎಲ್ಲಾ 15 ಮಹಾನಗರ ಪಾಲಿಕೆಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ.
ಅಹ್ಮದಾಬಾದ್‌ನ 192 ಸ್ಥಾನಗಳಲ್ಲಿ 146 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಸೂರತ್‌ನಲ್ಲಿ 115 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು (ಕೇವಲ 4 ಸ್ಥಾನ) ಧೂಳೀಪಟ ಮಾಡಿದೆ.
ಇದೇ ರೀತಿಯ ಟ್ರೆಂಡ್ ರಾಜ್‌ಕೋಟ್ ಮತ್ತು ವಡೋದರಾದಲ್ಲೂ ಕಂಡುಬಂದಿದ್ದು, ಬಿಜೆಪಿ ತಲಾ 65 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಎರಡಂಕಿ ತಲುಪಲು ಪರದಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



