ಭಾರತ-ಚೀನಾ 'ನಾಗರಿಕತೆಯ ತೊಟ್ಟಿಲುಗಳು'; ನಿಜವಾದ ನರಕಕೂಪ ನಿಮ್ಮದೇ: ಟ್ರಂಪ್'ಗೆ ಇರಾನ್ ತಿರುಗೇಟು
ಭಾರತ ಮತ್ತು ಚೀನಾ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಗರಿಕತೆಯ ತೊಟ್ಟಿಲುಗಳು. ಇಂತಹ ರಾಷ್ಟ್ರಗಳನ್ನು ಅವಮಾನಿಸುವುದು ಅಸಮರ್ಥ ಮತ್ತು ಅಜ್ಞಾನಪೂರ್ಣ ನಡೆ.

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನ್ಮಸಿದ್ಧ ಪೌರತ್ವ ಕುರಿತು ಹಂಚಿಕೊಂಡಿದ್ದ ವಿಡಿಯೋವೊಂದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ರಂಪ್ ಹೇಳಿಕೆ ಸಂಬಂಧ ಇರಾನ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇರಾನ್ ಭಾರತ ಮತ್ತು ಚೀನಾವನ್ನು “ನಾಗರಿಕತೆಯ ತೊಟ್ಟಿಲುಗಳು” ಎಂದು ಹೊಗಳಿದ್ದು, ಇಂತಹ ದೇಶಗಳನ್ನು ಅವಮಾನಿಸುವ ಹೇಳಿಕೆಗಳು ಅಸಮರ್ಪಕ ಮತ್ತು ಇತಿಹಾಸ ವಿರೋಧಿ ಎಂದು ಹೇಳಿದೆ.
ಇರಾನ್ನ ಹೈದರಾಬಾದ್ ಕಾನ್ಸುಲೇಟ್ ಜನರಲ್ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, ಭಾರತ ಮತ್ತು ಚೀನಾ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಗರಿಕತೆಯ ತೊಟ್ಟಿಲುಗಳು. ಇಂತಹ ರಾಷ್ಟ್ರಗಳನ್ನು ಅವಮಾನಿಸುವುದು ಅಸಮರ್ಥ ಮತ್ತು ಅಜ್ಞಾನಪೂರ್ಣ ನಡೆ ಎಂದು ಟೀಕಿಸಿದ್ದಾರೆ.
ಅಲ್ಲದೆ, ನಿಜವಾದ ನರಕದ ಕೂಪ ಇರುವುದು ಇರಾನ್ನ ನಾಗರಿಕತೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ ಯುದ್ಧಾಪರಾಧಿ ಅಧ್ಯಕ್ಷರ ಬಳಿ ಎಂದು ಹೇಳಿದ್ದಾರೆ.
ಮುಂಬೈಯಲ್ಲಿರುವ ಇರಾನ್ ರಾಯಭಾರಿ ಅಧಿಕಾರಿ ಕೂಡ ಭಾರತದ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯನ್ನು ಹೊಗಳುವ ವಿಡಿಯೋ ಹಂಚಿಕೊಂಡಿದ್ದಾರೆ,
ಅಲ್ಲದೆ, ಭಾರತಕ್ಕೆ ಬಂದು ಇಲ್ಲಿನ ಸಂಸ್ಕೃತಿಯನ್ನು ನೋಡುವಂತೆಯೂ ಟ್ರಂಪ್ ಅವರಿಗೆ ಆಹ್ವಾನ ನೀಡಿದ್ದು, “ಕಬಿ ಇಂಡಿಯಾ ಆಕೆ ದೇಖೋ, ಫಿರ್ ಬೋಲ್ನಾ” ಎಂದು ಹೇಳಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಭಾರತ ಮತ್ತು ಚೀನಾವನ್ನು "ನರಕದ ಕೂಪಗಳೆಂದು" ಎಂದು ಸಂಬೋಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



