'ಹೌದು, ನಾನು ನಟ, ಆದರೆ ರಾಜಕೀಯದಲ್ಲಿ ನಟಿಸಿಲ್ಲ': ಚೆನ್ನೈಯಲ್ಲಿ ರ‍್ಯಾಲಿಯಲ್ಲಿ ದಳಪತಿ ವಿಜಯ್ ಅಬ್ಬರದ ಭಾಷಣ; Video
ಚೆನ್ನೈ ರ‍್ಯಾಲಿಯಲ್ಲಿ ಸ್ವಲ್ಪ ತಾಳ್ಮೆ ಕಳೆದುಕೊಂಡ ವಿಜಯ್, “ಒಬ್ಬ ಸಚಿವರು ಮತ್ತೆ ಮತ್ತೆ ‘ವಿಜಯ್ ನಟ, ವಿಜಯ್ ನಟ’ ಎಂದು ಹೇಳುತ್ತಲೇ ಇದ್ದಾರೆ… ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸಿಲ್ಲ ಎಂದರು.

ನಟ-ರಾಜಕಾರಣಿ ದಳಪತಿ ವಿಜಯ್ ನಿನ್ನೆ ಮಂಗಳವಾರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅಂತಿಮ ಸುತ್ತಿನ ಮತ ಪ್ರಚಾರ ನಡೆಸಿದ್ದರು. ಈ ವೇಳೆ ಮಾಡಿದ ತೀವ್ರ ಭಾಷಣದಲ್ಲಿ ವಿರೋಧ ಪಕ್ಷಗಳ ನಾಯಕರ ಟೀಕೆಗೆ ತಕ್ಕ ಪ್ರತಿಕ್ರಿಯೆ ನೀಡಿದರು.
ನಿನ್ನೆ ಚೆನ್ನೈನಲ್ಲಿ ನಡೆದ ತಮ್ಮ ಪಕ್ಷ ತಮಿಳಗ ವೆತ್ರಿ ಕಳಗಂ (TVK) ರ‍್ಯಾಲಿಯಲ್ಲಿ ಭಾಗವಹಿಸಿದರು. ತಮ್ಮನ್ನು ಕೇವಲ ನಟ, ವಿಜಯ್ ಕೇವಲ ನಟನೆಗೆ ಮಾತ್ರ ತಕ್ಕ ವ್ಯಕ್ತಿ ರಾಜಕೀಯಕ್ಕಲ್ಲ ಎಂದು ಟೀಕಿಸುವವರಿಗೆ ತಿರುಗೇಟು ನೀಡಿದರು. ಕಳೆದ ವರ್ಷ ಕರೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯನ್ನು ಕೂಡ ಉಲ್ಲೇಖಿಸಿದರು, ಅಲ್ಲಿ 40 ಮಂದಿ ಮೃತಪಟ್ಟಿದ್ದರು.
ದಳಪತಿ ವಿಜಯ್ ಭಾಷಣ
ಚೆನ್ನೈ ರ‍್ಯಾಲಿಯಲ್ಲಿ ಸ್ವಲ್ಪ ಅಸಹನೀಯಗೊಂಡ ವಿಜಯ್, “ಒಬ್ಬ ಸಚಿವರು ಮತ್ತೆ ಮತ್ತೆ ‘ವಿಜಯ್ ನಟ, ವಿಜಯ್ ನಟ’ ಎಂದು ಹೇಳುತ್ತಲೇ ಇದ್ದಾರೆ… ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸಿಲ್ಲ. ನೀವು ಮಾಡುತ್ತಿರುವುದು ನಾಟಕದ ಮೇಲ್ನಾಟಕ, ಹಾಗಾದರೆ ನಿಮಗೆ ನಟರು-ನಟಿಯರು ಎಂದು ಕರೆಯಬೇಕಾ ಎಂದು ಪ್ರಶ್ನಿಸಿದರು.
ರ‍್ಯಾಲಿಯ ವೇಳೆ, ಕಳೆದ ವರ್ಷ ಕರೂರಿನಲ್ಲಿ ನಡೆದ TVK ರ‍್ಯಾಲಿಯ ದಬ್ಬಾಳಿಕೆ ಘಟನೆಯ ಕುರಿತು ವಿಜಯ್ ಮಾತನಾಡಿ, ನನ್ನನ್ನು ಏಕೆ ದೂಷಿಸುತ್ತೀರಿ, ಹಲವರು ಘಟನೆಯ ವಿಡಿಯೊ ಮಾಡಿದ್ದಾರೆ, ಅದನ್ನು ನೋಡಿದ್ದಾರೆ ಈಗ ನನ್ನನ್ನೇ ಆರೋಪಿಸುತ್ತಿದ್ದೀರಿ. ಪೊಲೀಸ್ ಅನುಮತಿ ನೀಡಿದ ಸಮಯದಲ್ಲಿ ನಾನು ಅಲ್ಲಿ ಇದ್ದೆ. ಎಲ್ಲವೂ ಲೈವ್‌ನಲ್ಲಿ ಇದೆ, ನಿಮಗೆ ಮನಸ್ಸಾಕ್ಷಿಯೇ ಇಲ್ಲವೇ ಎಂದು ಪ್ರಶ್ನಿಸಿದರು.
ವಿಜಯ್ ಅವರ ನಿನ್ನೆಯ ಭಾಷಣ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಒಬ್ಬರು, “ಚಿತ್ರಗಳಲ್ಲಿ ತೋರಿಸಿದಂತೆ ರಾಜಕೀಯ ಸುಲಭ ಎಂದು ವಿಜಯ್ ಭಾವಿಸಿದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿ 2-3 ವರ್ಷಗಳಲ್ಲಿ ರಾಜಕೀಯ ಬಿಟ್ಟು ಮತ್ತೆ ಚಿತ್ರರಂಗಕ್ಕೆ ಮರಳುತ್ತಾರೆ, ನೋಡುತ್ತಿರಿ ಎಂದು ಬರೆದಿದ್ದಾರೆ. ಮತ್ತೊಬ್ಬರು, ತನ್ನ ಕುಟುಂಬವನ್ನೇ ಒಂದಾಗಿ ಇಡಲು ಆಗದ ವ್ಯಕ್ತಿ ರಾಜ್ಯವನ್ನು ನಡೆಸಲು ಬರುತ್ತಾರೆ, ಪ್ರಗತಿಯ ಬಗ್ಗೆ ಮಾತನಾಡುತ್ತಾರೆ. ಜನರು ಮೂರ್ಖರೇ ಎಂದು ಟೀಕಿಸಿದ್ದಾರೆ. ಇನ್ನೊಬ್ಬರು, “ನಟನಾಗಿರುವುದನ್ನು ಬಿಟ್ಟು, ಒಂದು ರಾಜ್ಯವನ್ನು ಆಡಳಿತ ನಡೆಸಲು ನಿಮಗೆ ಸಾಮರ್ಥ್ಯವಿದೆಯೇ ಎಂದು ಕೇಳಿದ್ದಾರೆ.
ದಳಪತಿ ವಿಜಯ್ 2024ರ ಫೆಬ್ರವರಿ 2ರಂದು ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಆರಂಭಿಸಿದರು. ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ಚುನಾವಣೆಯಲ್ಲಿ ಈ ಪಕ್ಷವು 234 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ರಾಜ್ಯದೆಲ್ಲೆಡೆ ಪ್ರಚಾರ ನಡೆಸುತ್ತಿದ್ದರೂ, ಅವರ ಚಲನಚಿತ್ರ ವೃತ್ತಿ ಇನ್ನೂ ಅವರನ್ನು ಬಿಡುತ್ತಿಲ್ಲ. ಸಂಪೂರ್ಣ ಸಮಯದ ರಾಜಕೀಯಕ್ಕೆ ಕಾಲಿಡುವ ಮೊದಲು ವಿಜಯ್ ಅವರ ಕೊನೆಯ ಚಿತ್ರವೆಂದು ಪರಿಗಣಿಸಲ್ಪಡುವ ‘ಜನ ನಾಯಕನ್’ ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC) ಜೊತೆ ಪ್ರಮಾಣೀಕರಣ ವಿವಾದದಲ್ಲಿ ಸಿಲುಕಿದೆ. ಮೊನ್ನೆ ಏಪ್ರಿಲ್ 9ರಂದು ಈ ಚಿತ್ರ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ನಿರ್ಮಾಪಕರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




