ತಮಿಳು ನಾಡು ವಿಧಾನಸಭೆ ಚುನಾವಣೆ 2026

'ಹೌದು, ನಾನು ನಟ, ಆದರೆ ರಾಜಕೀಯದಲ್ಲಿ ನಟಿಸಿಲ್ಲ': ಚೆನ್ನೈಯಲ್ಲಿ ರ‍್ಯಾಲಿಯಲ್ಲಿ ದಳಪತಿ ವಿಜಯ್ ಅಬ್ಬರದ ಭಾಷಣ; Video
ಚೆನ್ನೈ ರ‍್ಯಾಲಿಯಲ್ಲಿ ಸ್ವಲ್ಪ ತಾಳ್ಮೆ ಕಳೆದುಕೊಂಡ ವಿಜಯ್, “ಒಬ್ಬ ಸಚಿವರು ಮತ್ತೆ ಮತ್ತೆ ‘ವಿಜಯ್ ನಟ, ವಿಜಯ್ ನಟ’ ಎಂದು ಹೇಳುತ್ತಲೇ ಇದ್ದಾರೆ… ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸಿಲ್ಲ ಎಂದರು.

ತಮಿಳುನಾಡಲ್ಲಿ NDA ಮೈತ್ರಿ ಅಧಿಕಾರಕ್ಕೆ ಬಂದರೆ ದೌರ್ಜನ್ಯ, ಅನ್ಯಾಯ ನಡೆಯುತ್ತವೆ: ಪ್ರಚಾರದ ಕೊನೆ ದಿನ ಆಟೋದಲ್ಲಿ ಸಂಚರಿಸಿ ಸಿಎಂ MK Stalin ಪ್ರಚಾರ; Video
ಇಂದು ತಮಿಳು ನಾಡು ಚುನಾವಣೆಗೆ ಕೊನೆಯ ಸುತ್ತಿನ ಪ್ರಚಾರ ನಡೆಸಿದ ಸಿಎಂ ಎಂ ಕೆ ಸ್ಟಾಲಿನ್ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿದ ವೀಡಿಯೊ ಸಂದೇಶದಲ್ಲಿ, 2021ರ ವಿಧಾನಸಭಾ ಚುನಾವಣೆಯ ವೇಳೆ ತಮ್ಮನ್ನು “ಕಲೈನಾರ್‌ಗಿಂತ ಅಪಾಯಕರ” ಎಂದು ಕರೆದ ಟೀಕೆಯನ್ನು ಅವರು ನೆನಪು ಮಾಡಿಕೊಂಡರು.

'ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಾನೇ ನಿರ್ಧರಿಸಿದೆ': ಟಿಕೆಟ್ ನಿರಾಕರಣೆ ವದಂತಿಗೆ ಅಣ್ಣಾಮಲೈ ಸ್ಪಷ್ಟನೆ
ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಕುರಿತು ಸ್ವತಃ ಅಣ್ಣಾಮಲೈಯವರೇ ಈಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಚುನಾವಣೆಗೆ ಸ್ಪರ್ಧಿಸದ ನಿರ್ಧಾರ ಸಂಪೂರ್ಣವಾಗಿ ತಮ್ಮದೇ ಎಂದು ಸ್ಪಷ್ಟಪಡಿಸಿದ್ದಾರೆ.

'ಸಾಮಾಜಿಕ ನ್ಯಾಯ ಸಿದ್ಧಾಂತಗಳಲ್ಲಿ ಯಾವುದೇ ರಾಜಿ ಇಲ್ಲ': ಬಿಜೆಪಿ ಜೊತೆ ಮೈತ್ರಿ ವದಂತಿ ತಳ್ಳಿಹಾಕಿದ TVK ವಿಜಯ್; Video
ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲೇ ನಾನು ಹೇಳಿದಂತೆ, ನಮ್ಮ ರಾಜಕೀಯದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ. ಸುಳ್ಳು ಪ್ರಚಾರವನ್ನು ನಂಬಬೇಡಿ. ದೇವರ ಆಶೀರ್ವಾದದಿಂದ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ ಎಂದರು.

Tamil Nadu election: 29 ವಿಧಾನಸಭೆ ಸೀಟು, 2 ರಾಜ್ಯಸಭೆ ಸ್ಥಾನ ನಿಮಗೆ; ಕಾಂಗ್ರೆಸ್ ಗೆ ಡಿಎಂಕೆ ಆಫರ್
ಮೂಲಗಳ ಪ್ರಕಾರ, ಕಾಂಗ್ರೆಸ್ ಬೇಡಿಕೆಯಾದ 34 ವಿಧಾನಸಭಾ ಸ್ಥಾನಗಳನ್ನು ಒಪ್ಪಲು ಡಿಎಂಕೆ ನಾಯಕತ್ವ ಸಮ್ಮತಿಸದಿದ್ದರೂ, 29 ಸ್ಥಾನಗಳವರೆಗೆ ಹಾಗೂ ಹೆಚ್ಚುವರಿಯಾಗಿ ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾಗಿದೆ.

ತಮಿಳುನಾಡು ಚುನಾವಣೆ: ದೆಹಲಿಯಲ್ಲಿ ಕನಿಮೋಳಿ-ರಾಹುಲ್ ಗಾಂಧಿ ಭೇಟಿ; ಒಪ್ಪಂದಕ್ಕೆ ಬಾರದ ಮಾತುಕತೆ; ಕಾಂಗ್ರೆಸ್ ಗೆ ಸಿಗುತ್ತಾ ಹೆಚ್ಚಿನ ಸ್ಥಾನ?
ರಾಹುಲ್ ಗಾಂಧಿ ನಿವಾಸದಿಂದ ಹೊರಬಂದ ಕನಿಮೋಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದೆ ಹೊರನಡೆದರು.

