ಭಾರತಕ್ಕೆ ಬೇಕಾಗಿರುವ 'ಮೋಸ್ಟ್ ವಾಂಟೆಡ್ ಲಷ್ಕರ್ ಭಯೋತ್ಪಾದಕ' ಪಾಕಿಸ್ತಾನದಲ್ಲಿ ಪತ್ತೆ!
ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯವನಾದ ಹಬೀಬುಲ್ಲಾ 2005 ಮತ್ತು 2007 ರ ನಡುವೆ ಸಲೀಂ ಲ್ಯಾಂಗ್ಡಾ ಅಲಿಯಾಸ್ ಸೈಫುಲ್ಲಾ ಎಂಬ ಹೆಸರಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ನವದೆಹಲಿ: ಇತ್ತೀಚಿಗೆ ನಡೆದ ಪಹಲ್ಗಾಮ್ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಹಲವು ಉಗ್ರ ಚಟುವಟಿಕೆಗಳಲ್ಲಿ ನಂಟು ಹೊಂದಿರುವ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಲಷ್ಕರ್ ಭಯೋತ್ಪಾದಕ ಹಬೀಬುಲ್ಲಾ ಅಲಿಯಾಸ್ ಸೈಫುಲ್ಲಾ ಸಾಜಿದ್ ಜಾಟ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಪತ್ತೆಯಾಗಿದ್ದಾನೆ.
ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯವನಾದ ಹಬೀಬುಲ್ಲಾ 2005 ಮತ್ತು 2007 ರ ನಡುವೆ ಸಲೀಂ ಲ್ಯಾಂಗ್ಡಾ ಅಲಿಯಾಸ್ ಸೈಫುಲ್ಲಾ ಎಂಬ ಹೆಸರಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ಈ ಅವಧಿಯಲ್ಲಿ ಕುಲ್ಗಾಮ್ ಜಿಲ್ಲೆಯ ಯಾರಿಪೋರಾದಲ್ಲಿ ನೆಲೆಯನ್ನು ಸ್ಥಾಪಿಸಿ ಸ್ಥಳೀಯ ಮಹಿಳೆಯನ್ನು ಮದುವೆಯಾಗಿದ್ದ. ಈ ಪ್ರದೇಶದಲ್ಲಿ ಅನೇಕ ಸ್ಥಳೀಯರಲ್ಲದವರ ಹತ್ಯೆಯಲ್ಲಿ ಆತ ಭಾಗಿಯಾಗಿದ್ದ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.
2007 ರಲ್ಲಿ ಆತ ಚಿಕ್ಕ ಮಗನನ್ನು ಕಾಶ್ಮೀರದಲ್ಲಿಯೇ ಬಿಟ್ಟು ತನ್ನ ಹೆಂಡತಿಯೊಂದಿಗೆ ಪಾಕಿಸ್ತಾನಕ್ಕೆ ವಾಪಸ್ಸಾಗಿ ಕಸೂರ್‌ನಲ್ಲಿ ಡೈರಿ ವ್ಯವಹಾರ. ಅಲ್ಲದೇ ಲಷ್ಕರ್ ಉಗ್ರರಿಗೆ ವರ್ಷಕ್ಕೆ ಹಲವಾರು ಬಾರಿ ತರಬೇತಿ ನೀಡುತ್ತಿದ್ದನು ಎಂದು ವರದಿಯಾಗಿದೆ.
2012 ರಲ್ಲಿ ಆತನಿಗೆ ಲಷ್ಕರ್‌ನ ಉನ್ನತ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಬಡ್ತಿ ನೀಡಿದ್ದರು. ಭಯೋತ್ಪಾದಕರಿಗೆ ತರಬೇತಿ ನೀಡುವುದರಿಂದ ಹಿಡಿದು ಗಡಿಯಾಚೆಗಿನ ದಾಳಿ ಸಂಘಟಿಸುವವರೆಗೆ ಹಲವು ಹೊಣೆ ಹೊತ್ತಿದ್ದ ಎನ್ನಲಾಗಿದೆ.
ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಣಿ ದಾಳಿಗೆ ನಿರ್ದೇಶನ ನೀಡುತ್ತಿದ್ದ 2013 ರಲ್ಲಿ ಹೈದರ್‌ಪೋರಾದಲ್ಲಿ ಭಾರತೀಯ ಸೇನಾ ಸಿಬ್ಬಂದಿ ಮೇಲೆ ದಾಳಿ, ಸುರಂಕೋಟ್ ಮತ್ತು ಇತರ ಪ್ರದೇಶಗಳಲ್ಲಿ ನಡೆದ ದಾಳಿಗಳು ಸೇರಿದಂತೆ ಹಲವು ದಾಳಿಗಳಲ್ಲಿ ತೊಡಗಿಸಿಕೊಂಡಿದ್ದ. ಜೂನ್ 9, 2024 ರಂದು ನಡೆದ ಹಿಂದೂ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಉಗ್ರರ ದಾಳಿಯಲ್ಲೂ ಈತನ ವಿರುದ್ಧ ಆರೋಪ ಕೇಳಿಬಂದಿದೆ. ಆ ದಾಳಿಯಲ್ಲಿ 9 ಮಂದಿ ಹತ್ಯೆಯಾಗಿದ್ದರು.
ಈ ಪ್ರಕರಣದಲ್ಲಿ ಎನ್‌ಐಎ ತನ್ನ ಮೊದಲ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ಯೋತ್ಪಾದಕ ಜಾಲದ ಬಗ್ಗೆ ತನಿಖೆಯನ್ನು ಮುಂದುವರಿಸಿದೆ. ಜೈಶ್-ಎ-ಮೊಹಮ್ಮದ್, ಅಲ್-ಖೈದಾ ಮತ್ತು ಹಮಾಸ್‌ನಂತಹ ಇತರ ಗುಂಪುಗಳೊಂದಿಗೆ ಸಂಭಾವ್ಯ ಸಂಪರ್ಕಗಳನ್ನು ಸಹ ಸಂಸ್ಥೆ ಪರಿಶೀಲಿಸುತ್ತಿದೆ. ಹೆಚ್ಚಿನ ಪುರಾವೆಗಳನ್ನು ಬಹಿರಂಗಪಡಿಸಲು ಮತ್ತು ದಾಳಿಯ ಹಿಂದಿನ ಜಾಲವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



