TCS ಬೆನ್ನಲ್ಲೇ ಇನ್ಫೋಸಿಸ್‌ನಲ್ಲೂ ಕಾರ್ಪೋರೇಟ್ ಜಿಹಾದ್: ಮಹಾರಾಷ್ಟ್ರ ಮುಖ್ಯಮಂತ್ರಿ, ಸಚಿವರಿಗೆ ದೂರು
ಪುಣೆಯ ಇನ್ಫೋಸಿಸ್ ಬಿಪಿಎಂನಲ್ಲಿ, ವಿಶೇಷವಾಗಿ ಡ್ಯಾಮ್ಲರ್ ಪ್ರಾಜೆಕ್ಟ್‌ನಲ್ಲಿ ನಡೆಯುತ್ತಿರುವ ಜಿಹಾದಿ ಕಿರುಕುಳದ ಬಗ್ಗೆ ಅನೇಕ ಹುಡುಗಿಯರು ನನಗೆ ದೂರು ನೀಡುತ್ತಿದ್ದಾರೆ. ದಯವಿಟ್ಟು ನೀವು ಇದನ್ನು ಪರಿಶೀಲಿಸಬಹುದೇ? ಎಂದು ಟ್ವೀಟ್ ಮಾಡಿದ್ದಾರೆ.

ಮುಂಬೈ: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ಕಾರ್ಪೊರೇಟ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಆರೋಪ ಕಾರ್ಪೋರೇಟ್ ವಲಯದಲ್ಲಿ ತೀವ್ರ ಕಳವಳ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ದೇಶದ ಮತ್ತೊಂದು ಪ್ರಮುಖ ಟೆಕ್ ದಿಗ್ಗಜ ಇನ್ಫೋಸಿಸ್‌ನಲ್ಲೂ(Infosys) ಕಾರ್ಪೋರೇಟ್ ಜಿಹಾದ್ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪುಣೆಯ ಇನ್ಫೋಸಿಸ್ ಬಿಪಿಎಂ(BPM) ಘಟಕದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಜಿಹಾದಿ ಕಿರುಕುಳ ನೀಡಲಾಗುತ್ತಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಸಚಿವ ನಿತೀಶ್ ರಾಣೆ ಅವರಿಗೆ ದೂರು ನೀಡಿದ್ದಾರೆ.
ಪುಣೆಯ ಇನ್ಫೋಸಿಸ್ ಬಿಪಿಎಂನಲ್ಲಿ, ವಿಶೇಷವಾಗಿ ಡ್ಯಾಮ್ಲರ್ ಪ್ರಾಜೆಕ್ಟ್‌ನಲ್ಲಿ ನಡೆಯುತ್ತಿರುವ ಜಿಹಾದಿ ಕಿರುಕುಳದ ಬಗ್ಗೆ ಅನೇಕ ಹುಡುಗಿಯರು ನನಗೆ ದೂರು ನೀಡುತ್ತಿದ್ದಾರೆ. ದಯವಿಟ್ಟು ನೀವು ಇದನ್ನು ಪರಿಶೀಲಿಸಬಹುದೇ?" ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಿತೀಶ್ ರಾಣೆ ಅವರು, ಈ ವಿಷಯವನ್ನು ಗಮನಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ.
ಇನ್ನು ಈ ಆರೋಪಗಳಿಗೆ ಸಂಬಂಧಿಸಿದಂತೆ ಇನ್ಫೋಸಿಸ್ ಕಂಪನಿಯು ಸ್ಪಷ್ಟನೆ ನೀಡಿದ್ದು, ಯಾವುದೇ ರೀತಿಯ ತಾರತಮ್ಯ ಅಥವಾ ಕಿರುಕುಳದ ವಿರುದ್ಧ ಕಂಪನಿಯು ಶೂನ್ಯ ಸಹನೆ(Zero-tolerance) ನೀತಿಯನ್ನು ಹೊಂದಿದೆ. ತನ್ನ ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಒದಗಿಸಲು ಬದ್ಧವಾಗಿರುವುದಾಗಿ ಹೇಳಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



