ಮಗಳಿಗೆ ಡಿವೋರ್ಸ್ ಸಿಕ್ಕಿದ ಕೂಡಲೇ ಸಂಭ್ರಮಾಚರಣೆ ಮಾಡಿದ ನಿವೃತ್ತ ನ್ಯಾಯಾಧೀಶನ ಕುಟುಂಬ; Video
ಕುಟುಂಬದವರು “I Love My Daughter, My Heart My Soul” ಎಂಬ ಬರಹವಿರುವ ಒಂದೇ ರೀತಿಯ ಕಪ್ಪು ಟೀ-ಶರ್ಟ್‌ಗಳನ್ನು ಧರಿಸಿ, ಮಗಳ ಫೋಟೋವಿರುವ ವಸ್ತ್ರಗಳನ್ನು ಧರಿಸಿ ರಸ್ತೆಯಲ್ಲಿ ಸಿಹಿ ಹಂಚಿ, ಡೊಳ್ಳು ವಾದ್ಯದ ನಡುವೆ ನೃತ್ಯ ಮಾಡುತ್ತಾ ಸಂಭ್ರಮಾಚರಣೆ ಮಾಡಿದರು.

ಉತ್ತರ ಪ್ರದೇಶದ ಮೀರಟ್‌ನಲ್ಲಿ ನಿವೃತ್ತ ನ್ಯಾಯಾಧೀಶರಾದ ಡಾ. ಜ್ಞಾನೇಂದ್ರ ಕುಮಾರ್ ಶರ್ಮಾ ಅವರು ತಮ್ಮ ಪುತ್ರಿ ಪ್ರಣಿತಾ ಅವರ ಏಳು ವರ್ಷದ ವಿವಾಹ ಅಂತ್ಯಗೊಂಡ ನಂತರ ಮಗಳನ್ನು ವಿಶಿಷ್ಟವಾಗಿ ಸ್ವಾಗತ ಮಾಡಿ ಮನೆಗೆ ಕರೆತಂದು ಸುದ್ದಿಯಾಗಿದ್ದಾರೆ. ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಜೊತೆ ನಡೆದ ಪ್ರಣೀತಾ ಮದುವೆ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಮೂಲಕ ಅಂತ್ಯಗೊಂಡಿತು.
ಕುಟುಂಬದವರು “I Love My Daughter, My Heart My Soul” ಎಂಬ ಬರಹವಿರುವ ಒಂದೇ ರೀತಿಯ ಕಪ್ಪು ಟೀ-ಶರ್ಟ್‌ಗಳನ್ನು ಧರಿಸಿ, ಮಗಳ ಫೋಟೋವಿರುವ ವಸ್ತ್ರಗಳನ್ನು ಧರಿಸಿ ರಸ್ತೆಯಲ್ಲಿ ಸಿಹಿ ಹಂಚಿ, ಡೊಳ್ಳು ವಾದ್ಯದ ನಡುವೆ ನೃತ್ಯ ಮಾಡುತ್ತಾ ಸಂಭ್ರಮಾಚರಣೆ ಮಾಡಿದರು. ಡಿವೋರ್ಸ್ ಸಮಯದಲ್ಲಿ ನಾವು ಯಾವುದೇ ಪರಿಹಾರ ತೆಗೆದುಕೊಂಡಿಲ್ಲ, ನಮಗೆ ಅವಳ ಸಂತೋಷವೇ ಮುಖ್ಯ ಎಂದು ಹೇಳಿದರು.
ಈ ಘಟನೆಗೆ ಹಲವು ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ವಿವಾಹ ಸಂಬಂಧದಲ್ಲಿನ ಕೊರತೆಗೆ ಮತ್ತು ವರದಕ್ಷಿಣೆ ಹಿಂಸೆಗೆ ತಂದೆ-ಮಗಳು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದನ್ನು ಪ್ರದರ್ಶನಾತ್ಮಕ ಕ್ರಮ ಎಂದು ಟೀಕಿಸಿದ್ದಾರೆ, ಇಂತಹ ಸಂದರ್ಭಗಳಲ್ಲಿ ಪುರುಷರ ಕಷ್ಟಗಳನ್ನು ಸಹ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಣಿತಾ (ವಿನೀತಾ ಎಂದು ಹೆಸರು ಉಲ್ಲೇಖಿಸಲಾಗಿದೆ) ಅವರು 2018ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ಮದುವೆಯಾಗಿದ್ದರು. ಇಬ್ಬರ ಮಧ್ಯೆ ಹೊಂದಾಣಿಕೆಯಾಗದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಏಳು ವರ್ಷಗಳ ನಂತರ ಇತ್ತೀಚೆಗೆ ಕಾನೂನುಬದ್ಧವಾಗಿ ಬೇರ್ಪಟ್ಟರು. ಮಗಳು ಮನೆಗೆ ಹಿಂದಿರುಗಿದಾಗ, ಮೀರತ್ ನ್ಯಾಯಾಲಯದಿಂದ ಮನೆಯವರೆಗೆ ಡೊಳ್ಳು, ತಾಳಗಳೊಂದಿಗೆ ಕುಟುಂಬದವರು ನೃತ್ಯ ಮಾಡುತ್ತಾ ಕರೆದುಕೊಂಡು ಬಂದರು.
ಎಲ್ಲರೂ “I Love My Daughter” ಎಂಬ ಬರಹವಿರುವ ಒಂದೇ ರೀತಿಯ ಟೀ-ಶರ್ಟ್‌ಗಳನ್ನು ಧರಿಸಿದ್ದರು. ನಿವೃತ್ತ ನ್ಯಾಯಾಧೀಶ ತಂದೆ, “ನನ್ನ ಮಗಳು ಮದುವೆ ಜೀವನದಲ್ಲಿ ಸಂತೋಷವಾಗಿರಲಿಲ್ಲ. ಅವಳ ಸಂತೋಷವನ್ನು ಮರಳಿ ತರಿಸುವುದು ನನ್ನ ಕರ್ತವ್ಯವಾಗಿದೆ ಎಂದರು.

ಕೊನೆಗೂ ಮೌನ ಮುರಿದ ಅಖಿಲಾ ಪಜಿಮಣ್ಣು: ಅನುಭವಿಸಿದ ನೋವು ನಮಗೆ ಮಾತ್ರ ಗೊತ್ತು; ಡಿವೋರ್ಸ್ ಕಾರಣ ಬಿಚ್ಚಿಟ್ಟ ಗಾಯಕಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


