ದೇಶ

ಸರ್ಜಿಕಲ್ ಸ್ಟ್ರೈಕ್‌ ಮೋದಿ-ಪರಿಕ್ಕರ್ ಅವರ 'ದೃಢ ಸಂಕಲ್ಪ'ದ ಫಲಿತಾಂಶ: ನಿವೃತ್ತ ಲೆಫ್ಟಿನೆಂಟ್ ಜನರಲ್

2016ರಲ್ಲಿ ನಿಯಂತ್ರಣ ರೇಖೆಯ (LoC) ಆಚೆಗಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಲಾದ ಸರ್ಜಿಕಲ್ ಸ್ಟ್ರೈಕ್‌ ನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ರಾಮರಾವ್ ನಿಂಬೋರ್ಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಸರ್ಜಿಕಲ್ ಸ್ಟ್ರೈಕ್‌ ಮೋದಿ-ಪರಿಕ್ಕರ್ ಅವರ 'ದೃಢ ಸಂಕಲ್ಪ'ದ ಫಲಿತಾಂಶ: ನಿವೃತ್ತ ಲೆಫ್ಟಿನೆಂಟ್ ಜನರಲ್
ರಾಜೇಂದ್ರ ರಾಮರಾವ್ ನಿಂಬೋರ್ಕರ್
Published On :

ಮುಂಬೈ: 2016ರಲ್ಲಿ ನಿಯಂತ್ರಣ ರೇಖೆಯ (LoC) ಆಚೆಗಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಲಾದ ಸರ್ಜಿಕಲ್ ಸ್ಟ್ರೈಕ್‌ ನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ರಾಮರಾವ್ ನಿಂಬೋರ್ಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತೋರಿದ 'ದೃಢ ಸಂಕಲ್ಪ'ದಿಂದಾಗಿ ಸಾಧ್ಯವಾಯಿತು ಎಂದರು. ನಮಗೆ ಸಾಮರ್ಥ್ಯವಿತ್ತು. ಆದರೆ ಯಾರಾದರೂ ಗ್ರೀನ್ ಸಿಗ್ನಲ್ ಕೊಡಬೇಕಿತ್ತು. ಅಲ್ಲಿಯವರೆಗೆ, ನಮ್ಮ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಸಾಕಷ್ಟು ಮಾತುಕತೆ ನಡೆಯುತ್ತಿತ್ತಾದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ನಿಂಬೋರ್ಕರ್ ತಿಳಿಸಿದರು.

ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಪ್ರಮುಖ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಮೂವರು ಹಿರಿಯ ಸೇನಾ ಕಮಾಂಡರ್‌ಗಳಲ್ಲಿ ಒಬ್ಬರಾಗಿದ್ದ ಈ ಮಾಜಿ ಸೇನಾಧಿಕಾರಿ, ಮೋದಿ ಮತ್ತು ಪರಿಕ್ಕರ್ ತಮ್ಮ ಕ್ರಮದ ಪರಿಣಾಮಗಳ ಜವಾಬ್ದಾರಿಯನ್ನು ಹೊರಲು ಸಿದ್ಧರಿದ್ದರು ಎಂದು ಹೇಳಿದರು. ನಗ್ರೋಟಾ ಮೂಲದ 16 ಕಾರ್ಪ್ಸ್‌ನ (ವೈಟ್ ನೈಟ್ ಕಾರ್ಪ್ಸ್) ಜನರಲ್ ಆಫೀಸರ್ ಕಮಾಂಡಿಂಗ್ (GOC) ಆಗಿದ್ದ ನಿಂಬೋರ್ಕರ್, ರಾಜೌರಿ ಮತ್ತು ಪೂಂಚ್ ಎಂಬ ಅವಳಿ ಗಡಿ ಜಿಲ್ಲೆಗಳಲ್ಲಿ ಕಾರ್ಯಾಚರಣೆಯ ಸಿದ್ಧತೆ ಮತ್ತು ತಂತ್ರಗಾರಿಕೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2016ರ ಸೆಪ್ಟೆಂಬರ್ 28ರ ರಾತ್ರಿ ನಮ್ಮ ಸೈನಿಕರು ಗಡಿಯನ್ನು ದಾಟಿ ಉರಿ, ಪೂಂಚ್ ಮತ್ತು ಭಿಂಬರ್ ವಲಯಗಳಲ್ಲಿ 82 ಭಯೋತ್ಪಾದಕರನ್ನು ಹತ್ಯೆ ಮಾಡಿದರು ಎಂದು ಹೇಳಿದರು. ನಮ್ಮ ದಾಳಿಯನ್ನು ಎಷ್ಟು ನಿಖರವಾಗಿ ಯೋಜಿಸಿ ಕಾರ್ಯಗತಗೊಳಿಸಲಾಗಿತ್ತು ಎಂದರೆ, ಯಾವುದೇ ಅಡ್ಡ ಪರಿಣಾಮಗಳು (ಅಂದರೆ ನಾಗರಿಕರಿಗೆ ಅಥವಾ ಆಸ್ತಿಪಾಸ್ತಿಗೆ ಹಾನಿ) ಸಂಭವಿಸಲಿಲ್ಲ ಎಂಬುದು ಗಮನಾರ್ಹ ಎಂದು ಹೇಳಿದರು. ಈ ಕಾರ್ಯಕ್ಕಾಗಿ ಆಯ್ಕೆ ಮಾಡಲಾದ ಎರಡು ಘಟಕಗಳು ಉಧಮ್‌ಪುರ ಮೂಲದ 9 ಪ್ಯಾರಾ (SF) ಮತ್ತು 4 ಪ್ಯಾರಾ (SF) ನ ವಿಶೇಷ ಪಡೆಗಳ ಯೋಧರನ್ನು ಒಳಗೊಂಡಿತ್ತು.

ನಾವು ಪಾಕಿಸ್ತಾನಕ್ಕೆ ತೀವ್ರವಾದ ಹೊಡೆತ ನೀಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟೆವು. ಇದನ್ನು ಬಾಲಕೋಟ್ ದಾಳಿ ಮತ್ತು 'ಆಪರೇಷನ್ ಸಿಂದೂರ್'ನಲ್ಲಿ ಮತ್ತಷ್ಟು ಮುಂದುವರಿಸಲಾಯಿತು ಎಂದು ನಿಂಬೋರ್ಕರ್ ಹೇಳಿದರು. 2016ರ ಸೆಪ್ಟೆಂಬರ್ 18ರಂದು ಉರಿ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿತ್ತು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.