ಐಶ್ವರ್ಯಾ ರೈ ಗಂಡನಿಂದ ದೂರವಾದರೆ ಮತಾಂತರ ಮಾಡಿ ಮದುವೆ ಆಗುತ್ತೇನೆ: ಪಾಕಿಸ್ತಾನದ ಧಾರ್ಮಿಕ ಗುರು ಹೇಳಿಕೆ ವೈರಲ್!
ನಾನು ಐಶ್ವರ್ಯಾ ರೈ ಅವರನ್ನು ಮತಾಂತರ ಮಾಡಿ ಅವರ ಹೆಸರನ್ನು ಆಯೇಷಾ ರೈ ಎಂದು ಬದಲಾಯಿಸಿಕೊಂಡು ಮದುವೆ ಆಗುತ್ತೇನೆ ಎಂದಿದ್ದಾರೆ.

ಮುಂಬಯಿ: ಐಶ್ವರ್ಯಾ ರೈ ಗಂಡನಿಂದ ದೂರವಾದರೆ ಅವರನ್ನು ಮತಾಂತರ ಮಾಡಿ ಮದುವೆ ಆಗುತ್ತೀನಿ ಎಂದು ಪಾಕಿಸ್ತಾನದ ಧಾರ್ಮಿಕ ಗುರು ಮುಫ್ತಿ ಅಬ್ದುಲ್ ಖಾವಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ಸಮಸ್ಯೆಗಳಿವೆ ಮತ್ತು ಅವರು ಬೇರೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳನ್ನು ನಾನು ಕೇಳಿದ್ದೇನೆ. ಒಂದು ವೇಳೆ ಅವರು ಬೇರ್ಪಟ್ಟರೆ, ಐಶ್ವರ್ಯಾ ರೈ ನನಗೆ ಮದುವೆಯ ಪ್ರಸ್ತಾಪವನ್ನು ಕಳುಹಿಸುತ್ತಾರೆ ಎಂದಿದ್ದಾರೆ.
ಮುಸ್ಲಿಮೇತರ ವ್ಯಕ್ತಿಯನ್ನು ನೀವು ಹೇಗೆ ಮದುವೆಯಾಗಬಹುದು ಎಂದು ನಿರೂಪಕರು ಕೇಳಿದಾಗ, ರಾಖಿ ಸಾವಂತ್ ಇಸ್ಲಾಂ ಸ್ವೀಕರಿಸಿ ಫಾತಿಮಾ ಆದ ಉದಾಹರಣೆಯನ್ನು ಮುಫ್ತಿ ನೀಡಿದ್ದಾರೆ. ನಾನು ಐಶ್ವರ್ಯಾ ರೈ ಅವರನ್ನು ಮತಾಂತರ ಮಾಡಿ ಅವರ ಹೆಸರನ್ನು ಆಯೇಷಾ ರೈ ಎಂದು ಬದಲಾಯಿಸಿಕೊಂಡು ಮದುವೆ ಆಗುತ್ತೇನೆ ಎಂದಿದ್ದಾರೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಕಳೆದ ಕೆಲ ಸಮಯದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಆಗಾಗ ಅವರ ಮದುವೆ ಜೀವನದ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಪತಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ನಡುವೆ ಮನಸ್ತಾಪ ಇದೆ. ಹೀಗಾಗಿ ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಮಾತುಗಳು ಕೆಲ ಸಮಯದ ಹಿಂದೆ ಬಾಲಿವುಡ್ ಗಲ್ಲಿಯಲ್ಲಿ ಹರಿದಾಡಿತ್ತು.

ಐಶ್ವರ್ಯಾ ರೈ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ ಅಭಿಷೇಕ್: ನಕಲಿ ಅಶ್ಲೀಲ ವಿಡಿಯೋ, ಚಿತ್ರ ಬಳಕೆಗೆ ತಡೆ ಕೋರಿ ಮನವಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


