ದೇಶ

ಬಿಹಾರ ವಿಧಾನಸಭಾ ಚುನಾವಣೆ 2025: ಸಂಜೆ 5 ಗಂಟೆಯವರೆಗೂ ಶೇ. 60 ರಷ್ಟು ಮತದಾನ!

18 ಜಿಲ್ಲೆಗಳ ಪೈಕಿ ಬೆಗುಸಾರೈನಲ್ಲಿ ದಾಖಲೆಯ ಶೇ. 59.82 ರಷ್ಟು ಮತದಾನವಾಗಿದೆ. ನಂತರ ಮುಜಾಫರೂರ್ ನಲ್ಲಿ ಶೇ.58.40, ಗೋಪಾಲ್ ಗಂಜ್ ನಲ್ಲಿ ಶೇ. 58.17 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ಬಿಹಾರ ವಿಧಾನಸಭಾ ಚುನಾವಣೆ 2025: ಸಂಜೆ 5 ಗಂಟೆಯವರೆಗೂ ಶೇ. 60 ರಷ್ಟು ಮತದಾನ!
ಬಿಹಾರದ ಮತದಾನದ ಚಿತ್ರ
Published On :

ಪಾಟ್ನಾ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಪ್ರಗತಿಯಲ್ಲಿದ್ದು, ಕೇಂದ್ರ ಚುನಾವಣಾ ಹಂಚಿಕೊಂಡ ಮಾಹಿತಿ ಪ್ರಕಾರ ಮಧ್ಯಾಹ್ನ 5 ಗಂಟೆಯವರೆಗೂ ಶೇ.60. 13 ರಷ್ಟು ಮತದಾನವಾಗಿದೆ.

18 ಜಿಲ್ಲೆಗಳ ಪೈಕಿ ಬೆಗುಸಾರೈನಲ್ಲಿ ದಾಖಲೆಯ ಶೇ. 67.32 ರಷ್ಟು ಮತದಾನವಾಗಿದೆ. ನಂತರ ಗೋಪಾಲ್ ಗಂಜ್ ನಲ್ಲಿ ಶೇ.64.96 ರಷ್ಟು, ಬಕ್ಸರ್ ನಲ್ಲಿ ಶೇ. 55.10 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ಎಲ್ಲಾ ಜಿಲ್ಲೆಗಳಿಗಿಂತ ಪಾಟ್ನಾದಲ್ಲಿ ಶೇ.48.69 ರಷ್ಟು ಅತ್ಯಂತ ಕಡಿಮೆ ಮತದಾನವಾಗಿದೆ. ಲಖಿಸಾರೈ ಜಿಲ್ಲೆಯಲ್ಲಿ ಶೇ. 57.39, ಮದೇಪುರದಲ್ಲಿ ಶೇ.55.96 ರಷ್ಟು ಮತದಾನವಾಗಿದೆ.

ಸಂಜೆ 5 ಗಂಟೆಯವರೆಗೂ ದರ್ಬಾಂಗ್ ನಲ್ಲಿ ಶೇ. 58.38, ಪಾಟ್ನಾದಲ್ಲಿ ಶೇ. 55.02, ಶೈಕ್ ಪುರದಲ್ಲಿ ಶೇ.52.36, ವೈಶಾಲಿಯಲ್ಲಿ ಶೇ. 59.45 ರಷ್ಟು ಮತದಾನವಾಗಿದೆ.

ಮೊದಲ ಹಂತದಲ್ಲಿ ಆರ್ ಜೆಡಿಯ ತೇಜಸ್ವಿ ಪ್ರಸಾದ್ ಯಾದವ್, ಬಿಜೆಪಿ ನಾಯಕರಾದ ಸಾಮ್ರಾಟ್ ಚೌದರಿ, ಮಂಗಲ್ ಪಾಂಡೆ, ಜೆಡಿಯುನ ಶ್ರವಣ್ ಕುಮಾರ್, ವಿಜಯ್ ಕುಮಾರ್ ಚೌದರಿ, ತೇಜ್ ಪ್ರತಾಪ್ ಯಾದವ್ ಸೇರಿದಂತೆ ಹಲವು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.