ದೇಶ

ನಿತೀಶ್ ಕುಮಾರ್ ರಾಜೀನಾಮೆ ನಂತರ ಪಕ್ಷದ ಹೆಸರು ಬದಲಾವಣೆಗೆ ಮುಂದಾದ JDU; ಇಲ್ಲಿದೆ ಕಾರಣ...

ಝಾ ಅವರ ಈ ಪ್ರಸ್ತಾವನೆಗೆ ಬಿಹಾರ ಉಪಮುಖ್ಯಮಂತ್ರಿ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ಸಚಿವ ಶ್ರಾವಣ್ ಕುಮಾರ್ ಸೇರಿದಂತೆ ಹಿರಿಯ ಜೆಡಿಯು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನಿತೀಶ್ ಕುಮಾರ್ ರಾಜೀನಾಮೆ ನಂತರ ಪಕ್ಷದ ಹೆಸರು ಬದಲಾವಣೆಗೆ ಮುಂದಾದ JDU; ಇಲ್ಲಿದೆ ಕಾರಣ...
ನಿತೀಶ್ ಕುಮಾರ್
Published On :

ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಮ್ಮ ಪಕ್ಷದ ಸರ್ವೋಚ್ಚ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೌರವಾರ್ಥವಾಗಿ, ಎರಡು ದಶಕಗಳಿಗೂ ಹೆಚ್ಚು ಹಳೆಯದಾದ ಪಕ್ಷದ ಹೆಸರನ್ನು 'ಜೆಡಿ-ಯು-ನಿತೀಶ್'(JD-U-Nitish) ಎಂದು ಮರುನಾಮಕರಣ ಮಾಡಲು ಜನತಾ ದಳ-ಯುನೈಟೆಡ್(ಜೆಡಿ-ಯು) ಮುಂದಾಗಿದೆ.

ಜೆಡಿ-ಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಈ ಪ್ರಸ್ತಾಪ ಮಾಡಿದ್ದು, ಪಕ್ಷದ ಇಂದಿನ ಸ್ಥಾನಮಾನಕ್ಕೆ ನಿತೀಶ್ ಕುಮಾರ್ ಅವರೇ ಕಾರಣರಾಗಿದ್ದು, ಪಕ್ಷದ ಸಿದ್ಧಾಂತವು ಅವರ ರಾಜಕೀಯ ಆದರ್ಶದಲ್ಲಿ ಬೇರೂರಿದೆ. ಆದ್ದರಿಂದ, ಪಕ್ಷದ ಹೆಸರನ್ನು ಜೆಡಿ(ಯು)-ನಿತೀಶ್ ಎಂದು ಬದಲಾಯಿಸುವ ಬಗ್ಗೆ ನಾವು ಪರಿಗಣಿಸಬೇಕು ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಝಾ ಅವರ ಈ ಪ್ರಸ್ತಾವನೆಗೆ ಬಿಹಾರ ಉಪಮುಖ್ಯಮಂತ್ರಿ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ಸಚಿವ ಶ್ರಾವಣ್ ಕುಮಾರ್ ಸೇರಿದಂತೆ ಹಿರಿಯ ಜೆಡಿಯು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ಸಲಹೆ. ಈ ವಿಷಯದ ಬಗ್ಗೆ ಔಪಚಾರಿಕ ಚರ್ಚೆ ನಡೆಯಲಿ. ಪಕ್ಷದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದಕ್ಕಿಂತ ಉತ್ತಮವಾದ ಪ್ರಸ್ತಾವನೆ ಮತ್ತೊಂದು ಇರಲು ಸಾಧ್ಯವಿಲ್ಲ. ಪಕ್ಷವು ಆದಷ್ಟು ಬೇಗ ಔಪಚಾರಿಕ ನಿರ್ಣಯವನ್ನು ತರಬೇಕೆಂದು ನಾನು ಸೂಚಿಸುತ್ತೇನೆ. ಅದನ್ನು ಸರ್ವಾನುಮತದಿಂದ ಅಂಗೀಕರಿಸಬೇಕು ಎಂದು ಶ್ರಾವಣ್ ಕುಮಾರ್ ಹೇಳಿದ್ದಾರೆ.

2003ರಲ್ಲಿ ಶರದ್ ಯಾದವ್ ನೇತೃತ್ವದ ಜನತಾದಳ ಮತ್ತು ಸಮತಾ ಪಕ್ಷದ ವಿಲೀನದ ಮೂಲಕ ಜೆಡಿಯು ಪಕ್ಷವೂ ರಚನೆಯಾಯಿತು. ಅಂದಿನಿಂದ 2016ರವರೆಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಶರದ್ ಯಾದವ್ ಸೇವೆ ಸಲ್ಲಿಸಿದ್ರೆ, ರಾಜ್ಯದಲ್ಲಿ ನಿತೀಶ್ ಕುಮಾರ್ ಮುನ್ನೆಡೆಸಿದ್ದರು. 2017ರಲ್ಲಿ ಶರದ್ ಯಾದವ್ ಪಕ್ಷ ಬಿಟ್ಟ ಬಳಿಕ ನಿತೀಶ್ ಕುಮಾರ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.