ಹಿಂದೂ ದೇವಾಲಯಗಳಲ್ಲಿ ಸಾವಿರಾರು ಟನ್ ಚಿನ್ನ ಇದೆ, ಅದನ್ನು ತೆಗೆದುಕೊಳ್ಳಿ, ಎಲ್ಲರಿಗೂ ಹಂಚಿ: ಉಲೇಮಾ ಹಿಂದ್ ಮೌಲ್ವಿ ಕರೆ!
ಅಂಕಿ-ಅಂಶಗಳನ್ನೂ ಉಲ್ಲೇಖಿಸಿರುವ ಈ ಇಸ್ಲಾಮಿಕ್ ಧರ್ಮಗುರು, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಿಂದೂ ದೇವಾಲಯಗಳಿವೆ ಅವುಗಳಲ್ಲಿ....

ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಬಿಡುಗಡೆ ಮಾಡಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವಾಗಲೇ ಇಸ್ಲಾಮ್ ಧರ್ಮದ ಮೌಲ್ವಿಯೊಬ್ಬರು ದೇವಾಲಯದ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದಾರೆ.
ಮಜ್ಲಿಸ್ ಉಲೇಮಾ-ಎ-ಹಿಂದ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಇಸ್ಲಾಮಿಕ್ ಧರ್ಮಗುರು ಆಗಿರುವ ಮೌಲಾನ ಕಲ್ಬೆ ಜವಾದ್ ದೇವಾಲಯಗಳಲ್ಲಿರುವ ಸಂಪತ್ತು, ಚಿನ್ನದ ಬಗ್ಗೆ ಮಾತನಾಡಿದ್ದಾರೆ.
ರಾಷ್ಟ್ರೀಯ ಸುದ್ದಿ ವಾಹಿನಿ ರಿಪಬ್ಲಿಕ್ ವರದಿಯ ಪ್ರಕಾರ ಮಾಧ್ಯಮಗಳೆದುರು ಮಾತನಾಡಿರುವ ಮೌಲಾನ ಕಲ್ಬೆ ದೇವಾಲಯಗಳಲ್ಲಿ ಟನ್ ಗಟ್ಟಲೆ ಚಿನ್ನ ಇದೆ. ಅದನ್ನು ಹೊರತೆಗೆದು ಎಲ್ಲರಿಗೂ ಹಂಚಿ ಎಂದು ಹೇಳಿದ್ದಾರೆ. ಅಂಕಿ-ಅಂಶಗಳನ್ನೂ ಉಲ್ಲೇಖಿಸಿರುವ ಈ ಇಸ್ಲಾಮಿಕ್ ಧರ್ಮಗುರು, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಿಂದೂ ದೇವಾಲಯಗಳಿವೆ, ಅದರಲ್ಲಿ ಸಾವಿರಾರು ಟನ್ ಚಿನ್ನ ಇದೆ. ಅದನ್ನು ಹೊರತೆಗೆದು ಸಾರ್ವಜನಿಕರಿಗೆ ಹಂಚಬೇಕು ಎಂದು ಹೇಳಿದ್ದಾರೆ.
ಈ ಸುದ್ದಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿವಾದದ ಸ್ವರೂಪವನ್ನೂ ಪಡೆದುಕೊಳ್ಳುತಿದೆ. ಹಿಂದೂ ದೇವಾಲಯಗಳ ವಿಷಯದಲ್ಲಿ ಮಾತನಾಡುವುದಕ್ಕೆ ಉಲೇಮಾ ಹಿಂದ್ ಮೌಲ್ವಿ ಯಾರು ಎಂಬ ಪ್ರಶ್ನೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಗಮನಿಸಿದ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



