'ಪ್ರತ್ಯೇಕವಾಗಿದ್ದೇವೆ ಎಂದರೆ...': Govinda ಜೊತೆ Divorce ಗಾಸಿಪ್ ಕುರಿತು ಕೊನೆಗೂ ಮೌನ ಮುರಿದ ಪತ್ನಿ ಸುನಿತಾ
ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ವಿವಾಹವಾಗಿದ್ದರು. ಅವರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಟೀನಾ ಎಂಬ ಮಗಳಿದ್ದು, ಓರ್ವ ಪುತ್ರ ಕೂಡ ಇದ್ದಾನೆ.

ನವದೆಹಲಿ: ಖ್ಯಾತ ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಅವರ ದಾಂಪತ್ಯ ಜೀವನ ಮತ್ತು ವಿಚ್ಛೇದನ ಕುರಿತು ಹಬ್ಬಿರುವ ಗಾಸಿಪ್ ಗಳ ಕುರಿತು ಕೊನೆಗೂ ಸುನಿತಾ ಅಹುಜಾ ಅವರು ಮೌನ ಮುರಿದಿದ್ದು, ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ವಿವಾಹವಾಗಿದ್ದರು. ಅವರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಟೀನಾ ಎಂಬ ಮಗಳಿದ್ದು, ಓರ್ವ ಪುತ್ರ ಕೂಡ ಇದ್ದಾನೆ. 38 ವರ್ಷಗಳ ಸುದೀರ್ಘ ವೈವಾಹಿಕ ಜೀವನದ ಬಳಿಕ ಇದೀಗ ಗೋವಿಂದ ಮತ್ತು ಸುನಿತಾ ಅವರ ವಿಚ್ಚೇದನದ ಕುರಿತು ವ್ಯಾಪಕ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಇಂಬು ನೀಡುವಂತೆ ಸುನಿತಾ ಅವರು ಪ್ರತ್ಯೇಕ ಕಚೇರಿ ಕೂಡ ಮಾಡಿಕೊಂಡಿದ್ದು, ಇದು ಡಿವೋರ್ಸ್ ಗಾಸಿಪ್ ಹೆಚ್ಚಾಗುವಂತೆ ಮಾಡಿದೆ.
ಇದೀಗ ಈ ಎಲ್ಲ ಊಹಾಪೋಹಗಳಿಗೆ ಕೊನೆಗೂ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರೇ ತೆರೆ ಎಳೆದಿದ್ದು, 'ಗೋವಿಂದನಿಂದ ತನ್ನನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ನಮ್ಮ ಮಗಳು ದೊಡ್ಡವಳಾಗಿದ್ದಾಳೆ. ಅದೇ ಸಮಯದಲ್ಲಿ ಸಾಕಷ್ಟು ಕೆಲಸಗಾರರು ಮನೆಗೆ ಬರುತ್ತಿದ್ದಾರೆ. ಗೋವಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, ಅವರನ್ನು ಭೇಟಿ ಮಾಡಲು ನಿತ್ಯ ನೂರಾರು ಕಾರ್ಯಕರ್ತರು ಮನೆಗೆ ಭೇಟಿ ನೀಡುತ್ತಿದ್ದರು.
ಇದರಿಂದ ನನ್ನ ಮಗಳಿಗೆ ಕೊಂಚ ಖಾಸಗಿತನ ಬೇಕೆಂದು ಎನ್ನಿಸಿದೆ. ಹೀಗಾಗಿ ತಾನು ಮನೆಯ ಸಮೀಪದಲ್ಲೇ ಕಚೇರಿ ಮಾಡಿಕೊಂಡಿದ್ದೇವೆ. ನಾನು ಮತ್ತು ಗೋವಿಂದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಕೆಲವೊಮ್ಮೆ ತಡರಾತ್ರಿಯಾಗುತ್ತದೆ. ಇದರಿಂದ ಮಗಳಿಗೆ ತೊಂದರೆಯಾಗುತ್ತಿದೆ. ಇದೂ ಕೂಡ ನಾವು ಬೇರೆ ಕಚೇರಿ ಮಾಡಲು ಕಾರಣವಾಯಿತು ಎಂದು ಹೇಳಿದ್ದಾರೆ.
ಗೋವಿಂದನಿಂದ ತನ್ನನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ
ಈ ಲೋಕದಲ್ಲಿ ನನ್ನನ್ನೂ ಗೋವಿಂದನನ್ನೂ ಬೇರ್ಪಡಿಸಬಲ್ಲವರು ಯಾರಾದರೂ ಇದ್ದರೆ ನನ್ನ ಮುಂದೆ ಬಂದು ನಿಲ್ಲಲಿ. ಈಗ ನಮ್ಮ ಮಗಳು ದೊಡ್ಡವಳಾಗಿದ್ದಾಳೆ, ನಾವು ಮನೆಯಲ್ಲಿ ಕೆಲವೊಮ್ಮೆ ಶಾರ್ಟ್ಸ್ ಧರಿಸಿ ಮನೆಯಲ್ಲಿ ತಿರುಗಾಡುತ್ತೇವೆ. ಮನೆಗೆ ಹಲವಾರು ಮಂದಿ ಬರುತ್ತಿದ್ದಾಗ ನಮ್ಮ ಖಾಸಗಿ ತನಕ್ಕೆ ಧಕ್ಕೆಯಾಗುತ್ತದೆ. ಆದರೆ ಈಗ ಕಚೇರಿ ಬೇರೆಡೆ ಮಾಡಲಾಗಿದ್ದು, ನಾವು ಮನೆಯಲ್ಲಿ ಮುಕ್ತವಾಗಿ ತಿರುಗಾಡಬಹುದು. ನಾನು, ನನ್ನ ಮಗ ಮತ್ತು ನನ್ನ ಮಗಳು ಒಟ್ಟಿಗೆ ವಾಸಿಸುತ್ತೇವೆ. ಇನ್ನು ಈ ಲೋಕದಲ್ಲಿ ಯಾರಾದರೂ ನನ್ನನ್ನು ಮತ್ತು ಗೋವಿಂದನನ್ನು ಬೇರ್ಪಡಿಸಬಹುದೆಂದು ಭಾವಿಸಿದರೆ, ಅವರು ಮುಂದೆ ಬಂದು ಪ್ರಯತ್ನಿಸಲಿ ಎಂದು ಸುನಿತಾ ಕಿಡಿಕಾರಿದ್ದಾರೆ.
ಅಲ್ಲದೆ ಅನಾವಶ್ಯಕವಾಗಿ ನೀವು ನಮ್ಮ ಜೀವನದ ಬಗ್ಗೆ ಮಾತನಾಡುವ ಮೂಲಕ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡುತ್ತೀರಿ ಎಂದು ನನಗೆ ಅನಿಸುತ್ತದೆ ಎಂದು ಸುನಿತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


