ದೇಶ

"Rude Employees": ಕೆಟ್ಟ ಪ್ರಯಾಣ ಅನುಭವ; ಬ್ರಿಟಿಷ್ ಏರ್ ವೇಸ್ ವಿರುದ್ಧ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕಿಡಿ!

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಿಯಾಗಿ ಸ್ಪಂದಿಸದ ಸಿಬ್ಬಂದಿ, ಲಗ್ಗೇಜು ವಿಳಂಬ ಮತ್ತಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಬ್ರಿಟಿಷ್ ಏರ್ ವೇಸ್ ಪ್ರಯಾಣ ಅತ್ಯಂತ ಕೆಟ್ಟ ಅನುಭವ ಎಂದು ಬರೆದುಕೊಂಡಿದ್ದಾರೆ.

"Rude Employees": ಕೆಟ್ಟ ಪ್ರಯಾಣ ಅನುಭವ; ಬ್ರಿಟಿಷ್ ಏರ್ ವೇಸ್ ವಿರುದ್ಧ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕಿಡಿ!
ಅರ್ಜುನ್ ಎರಿಗೈಸಿ
Published On :

ನವದೆಹಲಿ: ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ ಅವರು ಕೆಟ್ಟ ಪ್ರಯಾಣ ಅನುಭವದ ನಂತರ ಬ್ರಿಟಿಷ್ ಏರ್ ವೇಸ್ ವಿರುದ್ಧ ಕಿಡಿಕಾರಿದ್ದಾರೆ.

ಸರಿಯಾಗಿ ಸ್ಪಂದಿಸದ ಸಿಬ್ಬಂದಿ, ಲಗ್ಗೇಜು ವಿಳಂಬ ಮತ್ತಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಬ್ರಿಟಿಷ್ ಏರ್ ವೇಸ್ ಪ್ರಯಾಣ ಅತ್ಯಂತ ಕೆಟ್ಟ ಅನುಭವ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ದುರಹಂಕಾರದ ಸಿಬ್ಬಂದಿ ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಬ್ಯಾಗೇಜ್ ಗಾಗಿ 84 ಗಂಟೆಗಳ ವಿಳಂಬವಾಗಿದೆ. ಇದು ತೀರಾ ನಿರಾಶಾದಾಯಕವಾಗಿದೆ. ಇಮೇಲ್‌ಗಳು, ಫಾರ್ಮ್‌ಗಳು ಎಲ್ಲವನ್ನೂ ಮುಗಿಸಿ ಸಲ್ಲಿಸಲಾಗಿದೆ. ಇವೆಲ್ಲಾ ಮಾಡಿ ಎರಡಕ್ಕಿಂತ ಹೆಚ್ಚು ದಿನ ಆಗಿದೆ. ಆದಾಗ್ಯೂ, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.

ವಿಮಾನಯಾನ ಸಂಸ್ಥೆಯು ಈ ರೀತಿ ಗ್ರಾಹಕರನ್ನು ನಡೆಸಿಕೊಳ್ಳುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಅತ್ಯಂತ ಕೆಟ್ಟ ಪ್ರಯಾಣ ಅನುಭವದೊಂದಿಗೆ ನಾನು ಮರಳಿರುವುದಾಗಿ ಅವರು ಕಿಡಿಕಾರಿದ್ದಾರೆ. ಈ ಫೋಸ್ಟ್ ವೈರಲ್ ಆಗಿದೆ.

ಈ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ಎಕ್ಸ್ ಬಳಕೆದಾರರೊಬ್ಬರು, ಬ್ರಿಟಿಷ್ ಏರ್ ವೇಸ್ ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ಏರ್ ಲೈನ್ಸ್ ಆಗಿದೆ. ನೀವು ಒಂದು ವೇಳೆ ಯುರೋಪ್ ಗೆ ಹೋಗುವುದಾರೆ ಕತಾರ್ ಏರ್ ವೇಸ್ ಅಥವಾ ಎಮಿರೆನ್ಸ್ ನಲ್ಲಿ ಪ್ರಯಾಣಿಸಿ, ಏಷ್ಯಾ ದೇಶಗಳಿಗೆ ತೆರಳಬೇಕಾದರೆ ಸಿಂಗಾಪುರ ಏರ್ ಲೈನ್ಸ್ ಅಥವಾ ಕಾಥೈ ಫೆಸಿಪಿಕ್ ಏರ್ ಲೈನ್ಸ್ ನಲ್ಲಿ ತೆರಳಿ ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.