ಸನಾತನ ಧರ್ಮ ಬಲಿಷ್ಠವಾಗಿದ್ದರೆ, ಭಾರತ ಬಲಿಷ್ಠವಾಗುತ್ತದೆ: ಯೋಗಿ ಆದಿತ್ಯನಾಥ್
ಮಹಾಕುಂಭದ ಭಾಗವಾಗಿರುವ ಎಲ್ಲಾ ಸಂತರು, ಭಕ್ತರು ಅಥವಾ ಪ್ರವಾಸಿಗರು ಸಹ ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ದರೆ, ಸನಾತನ ಧರ್ಮ ಬಲಿಷ್ಠವಾಗುತ್ತದೆ.

ಮಹಾಕುಂಭ: ಜನರು ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು, ನಮ್ಮ ಸನಾತನ ಧರ್ಮ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗಿರುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿರೋಧ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಜಾತಿ-ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಹೀಗೆ ಮಾಡುವುದು ದೇಶದ್ರೋಹಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರು.
ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಭಜಿಸಬೇಕೆಂಬ ಕೆಲವು ಭಾಗಗಳ ಬೇಡಿಕೆಗೆ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು, ಉತ್ತರ ಪ್ರದೇಶದ ಸಾಮರ್ಥ್ಯವು ಅದರ ಏಕತೆಯಲ್ಲಿದೆ ಎಂದು ಪ್ರಯಾಗ್ ರಾಜದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಬಗ್ಗೆ ಹೇಳಿದರು.
ಮಹಾಕುಂಭವು ಏಕತೆ ಮತ್ತು ಸಮಗ್ರತೆಯ ಸಂದೇಶ ಸಾರುತ್ತದೆ, ಇದು ಜಗತ್ತಿಗೆ ತಲುಪಬೇಕು. ಮಹಾಕುಂಭದ ಭಾಗವಾಗಿರುವ ಎಲ್ಲಾ ಸಂತರು, ಭಕ್ತರು ಅಥವಾ ಪ್ರವಾಸಿಗರು ಸಹ ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ದರೆ, ಸನಾತನ ಧರ್ಮ ಬಲಿಷ್ಠವಾಗುತ್ತದೆ. ಸನಾತನ ಧರ್ಮ ಬಲಿಷ್ಠವಾಗಿದ್ದರೆ, ನಮ್ಮ ದೇಶ ಬಲಿಷ್ಠವಾಗಿರುತ್ತದೆ ಎಂದು ಯೋಗಿ ಆದಿತ್ಯನಾಥ್ ಅವರು ಮಹಾಕುಂಭಮೇಳದಲ್ಲಿ "ನ್ಯೂಸ್ 18 ನೆಟ್‌ವರ್ಕ್" ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



