ದೇಶ

ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ 73 ಸಾವಿರ ಕೋಟಿ ರೂ GST ಹಣ ಹಂಚಿಕೆ: UPಗೆ ಅತಿಹೆಚ್ಚು, ರಾಜ್ಯಕ್ಕೆ ಎಷ್ಟು?: ಇಲ್ಲಿದೆ ವಿವರ...

ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ತಿಂಗಳು ಹಂಚಿಕೆ ಹಣ ಎರಡು ಪಟ್ಟು ಹೆಚ್ಚಾಗಿದೆ.ಡಿಸೆಂಬರ್ ತಿಂಗಳಲ್ಲಿ 89,086 ಕೋಟಿ ರೂ ಜಿಎಸ್​ಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗಿತ್ತು.

ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ 73 ಸಾವಿರ ಕೋಟಿ ರೂ GST ಹಣ ಹಂಚಿಕೆ: UPಗೆ ಅತಿಹೆಚ್ಚು, ರಾಜ್ಯಕ್ಕೆ ಎಷ್ಟು?: ಇಲ್ಲಿದೆ ವಿವರ...
ಜಿಎಸ್ ಟಿ (ಸಂಗ್ರಹ ಚಿತ್ರ) — online desk
Published On :

ನವದೆಹಲಿ: ಕೇಂದ್ರ ಸರ್ಕಾರ ಜನವರಿ ತಿಂಗಳಿನ GST ಪರಿಹಾರ ಮೊತ್ತವನ್ನು ಇಂದು ಬಿಡುಗಡೆ ಮಾಡಿದೆ. ಒಟ್ಟು 1,73,030 ಕೋಟಿ ರೂಪಾಯಿ ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ತಿಂಗಳು ಹಂಚಿಕೆ ಹಣ ಎರಡು ಪಟ್ಟು ಹೆಚ್ಚಾಗಿದೆ.ಡಿಸೆಂಬರ್ ತಿಂಗಳಲ್ಲಿ 89,086 ಕೋಟಿ ರೂ ಜಿಎಸ್​ಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗಿತ್ತು.

ಈ ಬಾರಿ ಜಿಎಸ್​ಟಿ ಹಂಚಿಕೆಯಲ್ಲಿ ಅತಿಹೆಚ್ಚು ಪಾಲು (31,039 ಕೋಟಿ ರೂ) ಉತ್ತರಪ್ರದೇಶಕ್ಕೆ ಸಿಕ್ಕಿದೆ. ಬಿಹಾರಕ್ಕೆ 17,403 ಕೋಟಿ ರೂ ಸಿಕ್ಕಿದ್ದರೆ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ 10,000 ಕೋಟಿ ರೂಗಿಂತಲೂ ಅಧಿಕ ಜಿಎಸ್​ಟಿ ಪಾಲು ನೀಡಲಾಗಿದೆ. ಕರ್ನಾಟಕಕ್ಕೆ 6,310 ಕೋಟಿ ರೂ ಮಾತ್ರ ಲಭ್ಯವಾಗಿದೆ. ಅಚ್ಚರಿಯೆಂಬಂತೆ ಪ್ರಧಾನಿ ತವರು ರಾಜ್ಯ ಗುಜರಾತ್​ಗೆ ಕರ್ನಾಟಕಕ್ಕಿಂತಲೂ ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ.

15ನೇ ಹಣಕಾಸು ಆಯೋಗದ ಸೂತ್ರದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಎಸ್ ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುತ್ತದೆ.

ಜನವರಿಯಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾದ ಜಿಎಸ್​ಟಿ ಹಣದ ವಿವರ

  1. ಉತ್ತರಪ್ರದೇಶ: 31,039.84 ಕೋಟಿ ರೂ

  2. ಬಿಹಾರ: 17,403.36 ಕೋಟಿ ರೂ

  3. ಮಧ್ಯಪ್ರದೇಶ: 13,582.86 ಕೋಟಿ ರೂ

  4. ಪಶ್ಚಿಮ ಬಂಗಾಳ: 13,017.06 ಕೋಟಿ ರೂ

  5. ಮಹಾರಾಷ್ಟ್ರ: 10,930.31 ಕೋಟಿ ರೂ

  6. ರಾಜಸ್ಥಾನ್: 10,426.78 ಕೋಟಿ ರೂ

  7. ಒಡಿಶಾ: 7,834.80 ಕೋಟಿ ರೂ

  8. ತಮಿಳುನಾಡು: 7,057.89 ಕೋಟಿ ರೂ

  9. ಆಂಧ್ರಪ್ರದೇಶ: 7,002.52 ಕೋಟಿ ರೂ

  10. ಕರ್ನಾಟಕ: 6,310.40 ಕೋಟಿ ರೂ

  11. ಗುಜರಾತ್: 6,017.99 ಕೋಟಿ ರೂ

  12. ಛತ್ತೀಸ್​ಗಡ್: 5,895.13 ಕೋಟಿ ರೂ

  13. ಜಾರ್ಖಂಡ್: 5,722.10 ಕೋಟಿ ರೂ

  14. ಅಸ್ಸಾಮ್: 5,412.38 ಕೋಟಿ ರೂ

  15. ತೆಲಂಗಾಣ: 3,637.09 ಕೋಟಿ ರೂ

  16. ಕೇರಳ: 3,330.86 ಕೋಟಿ ರೂ

  17. ಪಂಜಾಬ್: 3,126.65 ಕೋಟಿ ರೂ

  18. ಅರುಣಾಚಲಪ್ರದೇಶ: 3,040.14 ಕೋಟಿ ರೂ

  19. ಉತ್ತರಾಖಂಡ್: 1,934.47 ಕೋಟಿ ರೂ

  20. ಹರ್ಯಾಣ: 1,891.22 ಕೋಟಿ ರೂ

  21. ಹಿಮಾಚಲಪ್ರದೇಶ: 1,436.16 ಕೋಟಿ ರೂ

  22. ಮೇಘಾಲಯ: 1,327.13 ಕೋಟಿ ರೂ

  23. ಮಣಿಪುರ್: 1,238.90 ಕೋಟಿ ರೂ

  24. ತ್ರಿಪುರಾ: 1,225.04 ಕೋಟಿ ರೂ

  25. ನಾಗಾಲ್ಯಾಂಡ್: 984.54 ಕೋಟಿ ರೂ

  26. ಮಿಜೋರಾಂ: 865.15 ಕೋಟಿ ರೂ

  27. ಸಿಕ್ಕಿಂ: 671.35 ಕೋಟಿ ರೂ

  28. ಗೋವಾ: 667.91 ಕೋಟಿ ರೂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.