ದೇಶ

Bitcoin case: ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ, ಶೋಧ

ಗೇನ್ ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿ ದೆಹಲಿ, ಪುಣೆ, ಚಂಡೀಗಢ, ನಾಂದೇಡ್, ಕೊಲ್ಹಾಪುರ ಮತ್ತು ಬೆಂಗಳೂರು ಸೇರಿದಂತೆ ಆರೋಪಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

Bitcoin case: ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ, ಶೋಧ
ಸಿಬಿಐ
Published On :

ನವದೆಹಲಿ: ಬಹುಕೋಟಿ ರೂಪಾಯಿ ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬೆಂಗಳೂರು ಸೇರಿ ದೇಶದ 60 ಕಡೆಗಳಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಶೋಧ ನಡೆಸಿದೆ.

ಗೇನ್ ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿ ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿದಂತೆ ಹಲವೆಡೆ ಸಿಬಿಐ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಿದೆ. ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ರಿಪ್ಟೊ ವ್ಯಾಲೆಟ್ಸ್, ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ ಇಮೇಲ್, ಕ್ಲೌಡ್ ಗಳಲ್ಲಿ ಇರುವ ಮಾಹಿತಿಗಳನ್ನು ಸಿಬಿಐ ಪಡೆದುಕೊಂಡಿದೆ.

ಪ್ರಕರಣ ಹಿನ್ನೆಲೆ

ಅಮಿತ್ ಭಾರದ್ವಾಜ್ ಮತ್ತು ಅಜಯ್ ಭಾರದ್ವಾಜ್ ಸೋದರರು ಗೇನ್ ಬಿಟ್ ಕಾಯಿನ್ ಜಾಲತಾಣ ಮೂಲಕ 2015ರಲ್ಲಿ ಪ್ರತಿ ತಿಂಗಳು ಶೇ. 10ರಷ್ಟು ಲಾಭ ಮಾಡಿಕೊಡುವುದಾಗಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದರು. ಆರಂಭದಲ್ಲಿ ಹೂಡಿಕೆದಾರರಿಗೆ ಲಾಭಾಂಶ ನೀಡಲಾಗುತ್ತಿತ್ತು. ಅನಂತರ ದಿನಗಳಲ್ಲಿ ಲಾಭಾಂಶ ನೀಡಲು ಸಾಧ್ಯವಾಗದಿದ್ದರಿಂದ ಹೂಡಿಕೆದಾರರಿಗೆ ನಷ್ಟ ಉಂಟಾಯಿತು ದೇಶಾದ್ಯಂತ ಈ ಕಂಪೆನಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.