Bitcoin case

ಬಿಟ್‌ಕಾಯಿನ್ ಪ್ರಕರಣ: ಆರೋಪ ಪಟ್ಟಿಯಿಂದ ನಾಲ್ವರು ಪೊಲೀಸರಿಗೆ ಮುಕ್ತಿ!
ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿಯನ್ನು ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿ, ಹಲವಾರು ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಲು ಒತ್ತಾಯಿಸಿದ್ದಾರೆ ಎಂಬ ಆರೋಪದ ಮೇಲೆ ಅಪರಾಧ ತನಿಖಾ ವಿಭಾಗದ (ಸಿಐಡಿ) ಎಸ್‌ಐಟಿ ತನಿಖೆ ನಡೆಸುತ್ತಿತ್ತು.

ಶ್ರೀಕಿ ಬಿಟ್‌ಕಾಯಿನ್ ಕೇಸ್: ಪೋಕರ್ ವೆಬ್‌ಸೈಟ್ ಹ್ಯಾಕ್ ಮಾಡಿ ಕೋಟಿ ಕೋಟಿ ರೂ ಸುಲಿಗೆ; ಸುನೀಶ್ ಹೆಗ್ಡೆ ವಿರುದ್ಧ ED ಗಂಭೀರ ಆರೋಪ
ವಿಚಾರಣೆ ವೇಳೆ ಶ್ರೀಕಿ, ಪೋಕರ್‌ಸೇಂಟ್ ಸೇರಿದಂತೆ ಹಲವು ಆನ್‌ಲೈನ್ ಪೋಕರ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾಗಿ ಹೇಳಿದ್ದಾನೆ. ಹ್ಯಾಕ್ ಮಾಡಿದ ಡೇಟಾಬೇಸ್‌ಗಳನ್ನು ಸುನೀಶ್ ಹೆಗ್ಡೆ ತನ್ನ ಪೋಕರ್ ವ್ಯವಹಾರಕ್ಕೆ ಬಳಸಿಕೊಂಡು ಸುಮಾರು 6 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾನೆ.

ಬಿಟ್‌ಕಾಯಿನ್ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ: ಗೃಹ ಸಚಿವ ಡಾ ಜಿ ಪರಮೇಶ್ವರ್
ಬಿಟ್‌ಕಾಯಿನ್ ಹಗರಣದ ಸಂಬಂಧ ವಿಶೇಷ ತನಿಖಾ ತಂಡ (SIT) ರಚಿಸಲಾಗಿತ್ತು. ತನಿಖೆ ಈಗ ಅಂತಿಮ ಹಂತದಲ್ಲಿದೆ. ಇದಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಇದೆ ಎಂದು ಪರಮೇಶ್ವರ್ ಹೇಳಿದರು.

Bitcoin case: ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ, ಶೋಧ
ಗೇನ್ ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿ ದೆಹಲಿ, ಪುಣೆ, ಚಂಡೀಗಢ, ನಾಂದೇಡ್, ಕೊಲ್ಹಾಪುರ ಮತ್ತು ಬೆಂಗಳೂರು ಸೇರಿದಂತೆ ಆರೋಪಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಗೆ ಸಂಕಷ್ಟ: SIT ನೊಟೀಸ್
ಕೆಲವು ತಿಂಗಳ ಹಿಂದೆ ಕೂಡ SIT ಅಧಿಕಾರಿಗಳು ನಲಪಾಡ್ ಅವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದರು. ಹ್ಯಾಕರ್ ಶ್ರೀಕಿಯಿಂದ ಕೋಟ್ಯಂತರ ರೂಪಾಯಿ ಹಣವನ್ನು ವ್ಯವಹಾರಿಕವಾಗಿ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ SIT ಅಧಿಕಾರಿಗಳು ತನಿಖೆ ನಡೆಸಿದ್ದರು.

ಬಿಟ್ ಕಾಯಿನ್ ಹಗರಣ: ಶ್ರೀಕಿ, ಖಂಡೇಲ್‌ವಾಲಾ ವಿರುದ್ಧದ ಕೋಕಾ ಕಾಯಿದೆ ರದ್ದು
ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು ರಾಬಿನ್ ಖಂಡೇಲ್‌ವಾಲಾ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ–2000) ಹೇರಿ ಸಿಐಡಿಯ ಜಿಡಿಪಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.

ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ಬಿಗ್ ರಿಲೀಫ್; 'ಘೋಷಿತ ಆರೋಪಿ' ಆದೇಶ ರದ್ದು
ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ. ಪೂಜಾರ್ ವಿರುದ್ಧದ ಘೋಷಿತ ಆರೋಪಿ ಆದೇಶವನ್ನು ಹೈಕೋರ್ಟ್ ಗುರುವಾರ ರದ್ದುಪಡಿಸಿದೆ...

ಮಂಡೆ ನೋವು 'ಬಿಟ್'ರೂ, ಮಂಡಿ ನೋವು ಬಿಡುತ್ತಿಲ್ಲ; ಸಿಎಂ ಖುರ್ಚಿ ಮೇಲೆ ನೆಮ್ಮದಿಯಿಂದ ಕೂರಕ್ಕೆ ಆಗ್ತಿಲ್ಲ! (ಅಂತಃಪುರದ ಸುದ್ದಿಗಳು)
-ಸ್ವಾತಿ ಚಂದ್ರಶೇಖರ್ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. ಕಳೆದ ವಾರ ಬಿಜೆಪಿ ಸರದಿ ಆದರೆ ಈ ವಾರ ಕಾಂಗ್ರೆಸ್ ಸರದಿ. ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ.

ಬಿಟ್ ಕಾಯಿನ್ ಪ್ರಕರಣ: ವಿದೇಶಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದಿಲ್ಲ- ಕಮಲ್ ಪಂತ್ ಸ್ಪಷ್ಟನೆ
ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ವಿದೇಶಿ ತನಿಖಾ ಸಂಸ್ಥೆ ತಮ್ಮನ್ನು ಸಂಪರ್ಕಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.

