ನಾಲ್ಕೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು FASTag ಪಾಸ್ ಮಾರಾಟ; ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ಸೇಲ್
ತಮಿಳುನಾಡಿನಲ್ಲಿ 1.5 ಲಕ್ಷ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಪಾಸ್ ವಾರ್ಷಿಕ ಪಾಸ್ ಗಳನ್ನು ಮಾರಾಟ ಮಾಡಿದೆ.

ನವದೆಹಲಿ: ಆಗಸ್ಟ್ 15 ರಂದು ಬಿಡುಗಡೆಯಾದ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ಗೆ, ವಿಶೇಷವಾಗಿ ಎರಡು ದಕ್ಷಿಣ ರಾಜ್ಯಗಳಲ್ಲಿ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ತಮಿಳುನಾಡಿನಲ್ಲಿ 1.5 ಲಕ್ಷ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಪಾಸ್ ವಾರ್ಷಿಕ ಪಾಸ್ ಗಳನ್ನು ಮಾರಾಟ ಮಾಡಿದೆ. ಸುಮಾರು ಒಂದು ಲಕ್ಷ ಪಾಸ್ ಖರೀದಿದಾರರೊಂದಿಗೆ, ಹರಿಯಾಣ ಪ್ರಸ್ತುತ ಮೂರನೇ ಅತಿ ಹೆಚ್ಚು ವಾರ್ಷಿಕ ಪಾಸ್ ಹೊಂದಿರುವ ರಾಜ್ಯವಾಗಿದೆ.
"ಪ್ರಯಾಣಿಕರಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಟೋಲಿಂಗ್ ಅನುಭವ ಒದಗಿಸುವ ಮೂಲಕ, ಹೊಸದಾಗಿ ಪರಿಚಯಿಸಲಾದ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯವು ದೇಶಾದ್ಯಂತ ಐದು ಲಕ್ಷ ಬಳಕೆದಾರರ ಹೆಗ್ಗುರುತನ್ನು ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ತಮಿಳುನಾಡು ಅತಿ ಹೆಚ್ಚು ವಾರ್ಷಿಕ ಪಾಸ್ಗಳನ್ನು ಖರೀದಿಸಿದೆ, ನಂತರ ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಹೆಚ್ಚು ಪಾಸ್ ಖರೀದಿಸಿವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಮೂಲಕ ಗರಿಷ್ಠ ವಹಿವಾಟುಗಳು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ದಾಖಲಾಗಿವೆ.
ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಪರಿಚಯಿಸಿರುವುದರಿಂದ ರಾಜಮಾರ್ಗ್ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಈ ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಬಹುದು. "ಇದು ಗೂಗಲ್ನ ಪ್ಲೇಸ್ಟೋರ್ ಶ್ರೇಯಾಂಕದಲ್ಲಿ ಒಟ್ಟಾರೆಯಾಗಿ 23ನೇ ಸ್ಥಾನವನ್ನು ತಲುಪಿದೆ ಮತ್ತು 15 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ಗಳೊಂದಿಗೆ ಪ್ರಯಾಣ ವಿಭಾಗದಲ್ಲಿ 2 ನೇ ಸ್ಥಾನವನ್ನು ತಲುಪಿದೆ.
ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯವು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್ವೇಗಳಲ್ಲಿ ಸುಮಾರು 1,150 ಟೋಲ್ ಪ್ಲಾಜಾಗಳಿಗೆ ಮಾನ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



