ದೇಶ

'ನನ್ನ ಸಹೋದರ ಮುಜಾಹಿದ್ದೀನ್': ಭಯಾನಕ ಸತ್ಯ ತೆರೆದಿಟ್ಟ ಪಹಲ್ಗಾಮ್ ದಾಳಿಯ ಉಗ್ರನ ಸಹೋದರಿ, Video!

ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಆದಿಲ್ ಗುರಿಯ ಮನೆಯನ್ನು ಭದ್ರತಾ ಪಡೆಗಳು ಕೆಡವಿವೆ.

'ನನ್ನ ಸಹೋದರ ಮುಜಾಹಿದ್ದೀನ್': ಭಯಾನಕ ಸತ್ಯ ತೆರೆದಿಟ್ಟ ಪಹಲ್ಗಾಮ್ ದಾಳಿಯ ಉಗ್ರನ ಸಹೋದರಿ, Video!
Published On :

ಶ್ರೀನಗರ: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಆದಿಲ್ ಗುರಿಯ ಮನೆಯನ್ನು ಭದ್ರತಾ ಪಡೆಗಳು ಕೆಡವಿವೆ. ಇನ್ನು ಭಯೋತ್ಪಾದಕನ ಸಹೋದರಿ ತನ್ನ ಕುಟುಂಬ ನಿರಪರಾಧಿ. ಆದರೆ ತನ್ನ ಸಹೋದರ ಮುಜಾಹಿದ್ದೀನ್ ಎಂದು ಹೇಳಿದ್ದಾಳೆ.

ಆದಿಲ್ ಗುರಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿದ್ದಾನೆ. ಟ್ರಾಲ್‌ನಲ್ಲಿ ಭಯೋತ್ಪಾದಕನ ಮನೆಯನ್ನು ಧ್ವಂಸಗೊಳಿಸಿದ ನಂತರ, ಅನಂತ್‌ನಾಗ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಭದ್ರತಾ ಪಡೆಗಳು ಅವನ ಇನ್ನೊಂದು ಮನೆಯನ್ನು ಸಹ ಕೆಡವಿದವು. ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಭಯೋತ್ಪಾದಕನ ಸಹೋದರಿ, ನನಗೆ ಇಬ್ಬರು ಸಹೋದರಿಯರಿದ್ದಾರೆ. ಒಬ್ಬ ಸಹೋದರ ಜೈಲಿನಲ್ಲಿದ್ದಾನೆ. ಇನ್ನೊಬ್ಬ ಮುಜಾಹಿದ್ದೀನ್. ನಾನು ನಿನ್ನೆ ಇಲ್ಲಿಗೆ ಬಂದಾಗ, ನನ್ನ ಹೆತ್ತವರು ಮತ್ತು ಸಂಬಂಧಿಕರು ಕಾಣಲಿಲ್ಲ. ಪೊಲೀಸರು ಅವನನ್ನು ಬಂಧಿಸಿ ತಮ್ಮೊಂದಿಗೆ ಕರೆದುಕೊಂಡು ಹೋದರು ಎಂದು ನನಗೆ ತಿಳಿಸಲಾಯಿತು.

ನನ್ನು ಸಹೋದರ ಈ ದಾಳಿಯಲ್ಲಿ ಭಾಗಿಯಾಗಿದ್ದಾನೋ ಇಲ್ಲವೋ ಎಂಬುದು ಅವಳಿಗೆ ತಿಳಿದಿಲ್ಲ. ಆದರೆ ನನ್ನು ಕುಟುಂಬಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಇಲ್ಲಿದ್ದಾಗ, ಭದ್ರತಾ ಸಿಬ್ಬಂದಿ ಬಂದು ಪಕ್ಕದವರ ಮನೆಗೆ ಹೋಗುವಂತೆ ಹೇಳಿದರು ಎಂದು ಅವಳು ಹೇಳಿದಳು. ಭದ್ರತಾ ಸಿಬ್ಬಂದಿಗಳು ಬಂದು ನಮ್ಮ ಮನೆಯಲ್ಲಿ ಬಾಂಬ್‌ನಂತಹದ್ದನ್ನು ಇರಿಸಿ, ನಂತರ ಮನೆಯನ್ನು ಸ್ಫೋಟಿಸಿದರು. ನಾವು ನಿರಪರಾಧಿಗಳು, ಅವರು ನಮ್ಮ ಮನೆಯನ್ನು ನಾಶಪಡಿಸಿದ್ದಾರೆ. ನಮಗೆ ಏನೂ ತಿಳಿದಿಲ್ಲ ಮತ್ತು ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಹೋದರಿ ಹೇಳಿದ್ದಾರೆ.

ಆದಿಲ್ ಗುರಿ ಯಾರು?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಆದಿಲಿ ಗುರ್ರಿ ಕೂಡ ಭಾಗಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಅವರು ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ಬ್ಲಾಕ್‌ನಲ್ಲಿರುವ ಗುರಿ ಗ್ರಾಮದ ನಿವಾಸಿ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಆತನ ಬಂಧನಕ್ಕೆ ಕಾರಣವಾಗುವ ನಿರ್ದಿಷ್ಟ ಮಾಹಿತಿ ನೀಡಿದವರಿಗೆ ಅನಂತನಾಗ್ ಪೊಲೀಸರು 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಆದಿಲ್ 2018ರಲ್ಲಿ ಪಾಕಿಸ್ತಾನಕ್ಕೆ ಅಕ್ರಮವಾಗಿ ಹೋಗಿದ್ದ, ಅಲ್ಲಿ ಭಯೋತ್ಪಾದಕ ತರಬೇತಿ ಪಡೆದು ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿದ್ದ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.