ದೇಶ

ಅಯೋಧ್ಯೆ: ರಾಮಮಂದಿರದ ಬಾಲ ರಾಮನಿಗೆ ಸೂರ್ಯ ತಿಲಕ! ಮನ ಮೋಹಕ Video

ಶ್ರೀರಾಮನ ಹಣೆಯ ಮೇಲಿನ ಸೂರ್ಯ ತಿಲಕವು ಸುಮಾರು 4 ನಿಮಿಷಗಳ ಕಾಲ ಇತ್ತು ಮತ್ತು ಅದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.

ಅಯೋಧ್ಯೆ: ರಾಮಮಂದಿರದ ಬಾಲ ರಾಮನಿಗೆ ಸೂರ್ಯ ತಿಲಕ! ಮನ ಮೋಹಕ Video
ಬಾಲರಾಮನಿಗೆ ಸೂರ್ಯ ತಿಲಕದ ಫೋಟೋ
Published On :

ಅಯೋಧ್ಯೆ: ರಾಮ ನವಮಿ ಅಂಗವಾಗಿ ಅಯೋಧ್ಯಯ ರಾಮ ಮಂದಿರದಲ್ಲಿ ಭಾನುವಾರ ಬಾಲ ರಾಮನಿಗೆ ಸೂರ್ಯ ತಿಲಕ ಆಚರಣೆ ನಡೆಯಿತು.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂರ್ಯ ತಿಲಕದ ವಿಡಿಯೋವನ್ನು ಹಂಚಿಕೊಂಡಿದೆ.

ಅಲ್ಲದೇ ಶ್ರೀರಾಮ ನವಮಿಯಂದು ರಾಮ ಲಲ್ಲಾ ಮೂರ್ತಿಗೆ ಅಭಿಷೇಕದ ಫೋಟೋಗಳನ್ನು ಕೂಡಾ ಫೋಸ್ಟ್ ಮಾಡಿದೆ. ಶ್ರೀರಾಮ ನವಮಿ ಹಾಗೂ ಈ ಅದ್ಬುತ ಕ್ಷಣಕ್ಕಾಗಿ ಅಪಾರ ಸಂಖ್ಯೆಯ ಭಕ್ತಾಧಿಗಳು ಬೆಳಗ್ಗೆಯಿಂದ ದೇವಾಲಯಕ್ಕೆ ಆಗಮಿಸುತ್ತಿದ್ದು, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಶ್ರೀರಾಮನ ಹಣೆಯ ಮೇಲಿನ ಸೂರ್ಯ ತಿಲಕವು ಸುಮಾರು 4 ನಿಮಿಷಗಳ ಕಾಲ ಇತ್ತು ಮತ್ತು ಅದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಧ್ಯಮ ಕೇಂದ್ರವು 'ಸೂರ್ಯ ತಿಲಕ'ದ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸೂರ್ಯನ ಕಿರಣಗಳು ರಾಮ ಲಲ್ಲಾನ ಹಣೆಯ ಮೇಲೆ ಬಿದ್ದ ತಕ್ಷಣ ನೆರೆದಿದ್ದ ಭಕ್ತರು ಸಂತೋಷದಿಂದ ನೃತ್ಯ ಮಾಡಿದರು. ಅಯೋಧ್ಯೆಗೆ ತಲುಪಲು ಸಾಧ್ಯವಾಗದವರು, ಶ್ರೀರಾಮ ಲಲ್ಲಾನ ಮಹಾಮಸ್ತಕಾಭಿಷೇಕದ ನೇರ ಪ್ರಸಾರವನ್ನು ತಮ್ಮ ಸ್ಥಳಗಳಿಂದ ವೀಕ್ಷಿಸಿದರು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.