ಗುಜರಾತ್: ಕಚ್ ನಲ್ಲಿ 3.3 ತೀವ್ರತೆಯ ಭೂಕಂಪನ! ಯಾವುದೇ ಹಾನಿ ಇಲ್ಲ
ಬೆಳಿಗ್ಗೆ 10.05 ರ ಹೊತ್ತಿಗೆ ಕಂಪನ ಸಂಭವಿಸಿದ್ದು, ರಾಪರ್ ನ ಪಶ್ಚಿಮ ನೈರುತ್ಯಕ್ಕೆ 12 ಕಿಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಗಾಂಧಿನಗರ ಮೂಲದ ಐಎಸ್‌ಆರ್ ತಿಳಿಸಿದೆ.

ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 3.3 ತೀವ್ರತೆಯ ಭೂ ಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ತಿಳಿಸಿದೆ. ಭೂಕಂಪನದಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 10.05 ರ ಹೊತ್ತಿಗೆ ಕಂಪನ ಸಂಭವಿಸಿದ್ದು, ರಾಪರ್ ನ ಪಶ್ಚಿಮ ನೈರುತ್ಯಕ್ಕೆ 12 ಕಿಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಗಾಂಧಿನಗರ ಮೂಲದ ಐಎಸ್‌ಆರ್ ತಿಳಿಸಿದೆ.
ಇದು ಈ ತಿಂಗಳಿನಲ್ಲಿ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಇಲ್ಲಿಯವರೆಗೂ ದಾಖಲಾದ 3 ಕ್ಕಿಂತ ಹೆಚ್ಚು ತೀವ್ರತೆಯ ನಾಲ್ಕನೇ ಕಂಪನವಾಗಿದೆ ಎಂದು ಐಎಸ್ಆರ್ ಮಾಹಿತಿ ನೀಡಿದೆ.
ಗುಜರಾತ್‌ನಲ್ಲಿ ಭೂಕಂಪನದ ಅಪಾಯ ತುಂಬಾ ಹೆಚ್ಚಾಗಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (GSDMA) ಒದಗಿಸಿದ ಮಾಹಿತಿಯ ಪ್ರಕಾರ, ಕಳೆದ 200 ವರ್ಷಗಳಲ್ಲಿ ಇಲ್ಲಿ ಒಂಬತ್ತು ಪ್ರಮುಖ ಭೂಕಂಪನ ಆಗಿದೆ.
2001 ರ ಕಚ್ ಭೂಕಂಪ ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೇ ಅತಿದೊಡ್ಡ ಮತ್ತು ಎರಡನೇ ವಿನಾಶಕಾರಿ ಭೂಕಂಪವಾಗಿದೆ ಎಂದು ಹೇಳಿದೆ.
2001 ರ ಜನವರಿ 26 ರಂದು ಗುಜರಾತ್ ಕಚ್‌ನ ಭಚೌ ಬಳಿ 6.9 ತೀವ್ರತೆಯ ಭೂಕಂಪನ ಆಗಿತ್ತು. ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರಿತು. ಇದರಿಂದ ಸುಮಾರು 13,800 ಜನರು ಸಾವನ್ನಪ್ಪಿದ್ದರೆ, 1.67 ಲಕ್ಷ ಜನರು ಗಾಯಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



