Kutch

ಗುಜರಾತ್ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ, ಕಚ್ ನಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ
ನಿನ್ನೆ ಸಂಜೆ ಕಛ್‌ನಾದ್ಯಂತ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಯಿತು. ಗಡಿಯಲ್ಲಿ ಹೊಸ ಡ್ರೋನ್ ಗಳು ಪತ್ತೆಯಾಗಿವೆ.

ಗುಜರಾತ್ನಲ್ಲಿ 3.4 ತೀವ್ರತೆಯ ಭೂಕಂಪನ
ಭೂಕಂಪನದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪ್ರದಾಯ ಮುಂದುವರಿಸಿದ ಪ್ರಧಾನಿ ಮೋದಿ: ಗುಜರಾತ್ ನ ಕಚ್ ನಲ್ಲಿ BSF ಯೋಧರ ಜೊತೆ ದೀಪಾವಳಿ ಆಚರಣೆ
ಸೇನಾ ಸಮವಸ್ತ್ರ ಧರಿಸಿ ಗುಜರಾತ್ ನ ಕಚ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿರುವ ಭದ್ರತಾ ಸಿಬ್ಬಂದಿಯನ್ನು ಭೇಟಿ ಮಾಡಿ, ಅವರಿಗೆ ಹಬ್ಬದ ಶುಭಾಶಯಗಳನ್ನು ಹೇಳುವ ಮೂಲಕ ಇಂದು ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದರು.

ಗುಜರಾತ್: ಯಾತ್ರಾರ್ಥಿಗಳಿದ್ದ ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿ, ಮೂವರ ಸಾವು, 11 ಮಂದಿಗೆ ಗಾಯ
ಆಶಾಪುರ ಮಾತಾ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳಿದ್ದ ಟ್ರ್ಯಾಕ್ಟರ್‌ಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಹೀಗಾಗಿ ಇಬ್ಬರು ಮಹಿಳೆಯರು ಮತ್ತು ಒಂಬತ್ತು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗುಜರಾತ್: ಕಚ್ ನಲ್ಲಿ 3.3 ತೀವ್ರತೆಯ ಭೂಕಂಪನ! ಯಾವುದೇ ಹಾನಿ ಇಲ್ಲ
ಬೆಳಿಗ್ಗೆ 10.05 ರ ಹೊತ್ತಿಗೆ ಕಂಪನ ಸಂಭವಿಸಿದ್ದು, ರಾಪರ್ ನ ಪಶ್ಚಿಮ ನೈರುತ್ಯಕ್ಕೆ 12 ಕಿಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಗಾಂಧಿನಗರ ಮೂಲದ ಐಎಸ್‌ಆರ್ ತಿಳಿಸಿದೆ.

ಗುಜರಾತ್: ಗುಂಡಿಕ್ಕಿಕೊಂಡು ವಾಯುಪಡೆಯ ಗರುಡ್ ಕಮಾಂಡೋ ಆತ್ಮಹತ್ಯೆ
ಭಾರತೀಯ ವಾಯುಪಡೆ (ಐಎಎಫ್) ನ ಗರುಡ್ ಕಮಾಂಡೋ ಸ್ವಯಂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ನಲ್ಲಿ ವರದಿಯಾಗಿದೆ.

ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ಜೋಯ್ ಚಂಡಮಾರುತ
ಬಿಪರ್ಜೋಯ್ ಚಂಡಮಾರುತ ಗುಜರಾತ್ ನ ಸೌರಾಷ್ಟ್ರ ಮತ್ತು ಕಚ್ ಕರಾವಳಿ ಜಿಲ್ಲೆಗಳಿಗೆ ಗುರುವಾರ ಸಂಜೆ ಅಪ್ಪಳಿಸಿದ್ದು, ಈಗಾಗಲೇ ಅಪಾಯ ಪ್ರದೇಶಗಳಲ್ಲಿರುವ ಸುಮಾರು 94 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.

ಗುಜರಾತ್ ನ ಕಚ್‌ನಲ್ಲಿ 3.5 ತೀವ್ರತೆಯ ಭೂಕಂಪ
ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಬುಧವಾರ ಸಂಜೆ 3.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಪ್ರದೇಶಕ್ಕೆ 'ಬಿಪರ್‌ಜೋಯ್' ಚಂಡಮಾರುತ ಅಪ್ಪಳಿಸುತ್ತಿರುವ ಸಮಯದಲ್ಲಿ ಭೂಮಿ ಕಂಪಿಸಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಗುಜರಾತ್ ಸಿಎಂ ಎಲ್ಲವೂ ಸರಿಯಾಗಿದೆ ಎಂದ ಕೆಲವೇ ಗಂಟೆಗಳಲ್ಲಿ ಮತ್ತೆ ಚಂಡಮಾರುತದ ಭೀತಿ
ವಾಯು ಚಂಡಮಾರುತದ ಅಬ್ಬರ ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮರುಕಳಿಸುವ ಭೀತಿ ಎದುರಾಗಿದೆ.

