ದೇಶ

Video: 'ಪ್ರೀತಿ ಬೇಕು ಅಂದ್ರೆ ಕ್ಲೀನ್ ಶೇವ್ ಮಾಡಿಕೊಳ್ಳಿ'; ಯುವತಿಯರ ಹೊಸ Protest!

ಜನ ಎಂತೆಂಥ ವಿಚಾರಕ್ಕೆಲ್ಲಾ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ ಎಂದರೆ ಇದಕ್ಕೂ ಪ್ರತಿಭಟನೆ ಮಾಡುತ್ತಾರಾ? ಎಂದು ನೀವು ಪ್ರಶ್ನಿಸಬೇಕು.. ಅಂತಹುದೇ ವಿಚಾರವನ್ನು ಮುಂದಿಟ್ಟುಕೊಂಡು ಮಧ್ಯಪ್ರದೇಶದ ಇಂದೋರ್ ನಲ್ಲಿ ಯುವತಿಯರ ಗ್ಯಾಂಗ್ ವೊಂದು ಪ್ರತಿಭಟನೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Video: 'ಪ್ರೀತಿ ಬೇಕು ಅಂದ್ರೆ ಕ್ಲೀನ್ ಶೇವ್ ಮಾಡಿಕೊಳ್ಳಿ'; ಯುವತಿಯರ ಹೊಸ Protest!
ಯುವತಿಯರ ಕ್ಲೀನ್ ಶೇವ್ ಪ್ರೊಟೆಸ್ಟ್
Published On :

ಇಂದೋರ್: ಯುವತಿಯರ ಗುಂಪೊಂದು ಗಂಡಸರ ಗಡ್ಡದ ಮೇಲೆ ಕಣ್ಣುಹಾಕಿದ್ದು, ಉದ್ದುದ್ದ ಗಡ್ಡ ಬಿಡದೇ ಕ್ಲೀನ್ ಶೇವ್ ಮಾಡಿ ಎಂದು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಹೌದು.. ಜನ ಎಂತೆಂಥ ವಿಚಾರಕ್ಕೆಲ್ಲಾ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ ಎಂದರೆ ಇದಕ್ಕೂ ಪ್ರತಿಭಟನೆ ಮಾಡುತ್ತಾರಾ? ಎಂದು ನೀವು ಪ್ರಶ್ನಿಸಬೇಕು.. ಅಂತಹುದೇ ವಿಚಾರವನ್ನು ಮುಂದಿಟ್ಟುಕೊಂಡು ಮಧ್ಯಪ್ರದೇಶದ ಇಂದೋರ್ ನಲ್ಲಿ ಯುವತಿಯರ ಗ್ಯಾಂಗ್ ವೊಂದು ಪ್ರತಿಭಟನೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಕ್ಲೀನ್ ಶೇವ್ ಮಾಡಿ ಪ್ರತಿಭಟನೆ

ಅಂದಹಾಗೆ ಯುವತಿಯರ ಗ್ಯಾಂಗ್ ಪ್ರತಿಭಟನೆ ನಡೆಸಿರುವುದು ಹುಡುಗರ ಗಡ್ಡದ ವಿಚಾರಕ್ಕೆ... ಹುಡುಗರು ತಮ್ಮ ಗಡ್ಡವನ್ನು ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಹುಡುಗಿಯರು ಪ್ರತಿಭಟನೆ ನಡೆಸಿದ್ದಾರೆ. ಎಲ್ಲಿ ನೋಡಿದರೂ ಗಡ್ಡ ಬಿಟ್ಟ ಹುಡುಗರೇ ಕಾಣುತ್ತಾರೆ. ಗಡ್ಡವಿಲ್ಲದ ಗೆಳೆಯನನ್ನು ಪಡೆಯಬೇಕೆಂಬ ಆಸೆ ನಮ್ಮದು ಎಂದು ಹೇಳಿ ಕ್ಲೀನ್ ಶೇವ್ ಬಾಯ್‌ಫ್ರೆಂಡ್‌ (boyfriend)ಗಾಗಿ ರ್ಯಾಲಿ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಬೋರ್ಡ್ ಮೇಲೆ, 'ನೋ ಕ್ಲೀನ್ ಶೇವ್ ನೋ ಲವ್', 'ಗಡ್ಡ ತೆಗೆಯಿರಿ, ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಿ', 'ಗಡ್ಡ ಬಿಟ್ಕೊಳ್ಳಿ ಇಲ್ಲ.. ಗರ್ಲ್ ಫ್ರೆಂಡ್ ಇಟ್ಕೊಳ್ಳಿ', 'ಗಡ್ಡ ಬೇಕೋ ಅಥವಾ ಗರ್ಲ್ ಫ್ರೆಂಡ್ ಬೇಕೋ' ಆಯ್ಕೆ ನಿಮ್ಮದಾಗಿದೆ. ಗಡ್ಡವಿಲ್ಲದ ಗೆಳೆಯನನ್ನು ಪಡೆಯಬೇಕೆಂಬ ಆಸೆ ನಮ್ಮದು ಎಂಬ ಬೋರ್ಡ್ ಹಿಡಿದು, ಘೋಷಣೆ ಕೂಗಿದ್ದಾರೆ.

ಸಾರ್ವಜನಿಕರ ಗೊಂದಲ

ಇನ್ನು ಈ ಹುಡುಗಿಯರ ಪ್ರತಿಭಟನೆ ನೋಡಿದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದು, ಇದು ಯಾವ ರೀತಿ ರ್ಯಾಲಿ ಎಂಬುದು ಅವರಿಗೆ ಗೊತ್ತಾಗ್ತಿಲ್ಲ. ಈ ವಿಡಿಯೋ ನಿಜವಾ ಇಲ್ಲ ರೀಲ್ ಗಾಗಿ ಮಾಡಲಾಗಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ತರಹೇವಾರಿ ಕಮೆಂಟ್ ಗಳು

ಕೆಲವರು ಹುಡುಗಿಯರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹುಡುಗ್ರು ಗಡ್ಡವಿದ್ದಾಗ ಒಂದು ರೀತಿ ಕಾಣ್ತಾರೆ. ಶೇವ್ ಮಾಡಿದಾಗ ಇನ್ನೊಂದು ರೀತಿ ಕಾಣ್ತಾರೆ. ನನಗೆ ಇದ್ರ ಅನುಭವವಾಗಿದೆ ಎಂದು ಓರ್ವ ಯುವತಿ ಕಮೆಂಟ್ ಮಾಡಿದ್ದಾರೆ. ಅಂತೆಯೇ ಈ ಪ್ರತಿಭಟನೆ ನನ್ನ ಕಣ್ಣುತೆರೆಸಿದೆ, ಇಷ್ಟು ದಿನ ಯಾಕೆ ನಾನು ಸಿಂಗಲ್ ಆಗಿದ್ದೆ ಎಂಬುದು ಗೊತ್ತಾಗಿದೆ ಎಂದು ಮತ್ತೊಬ್ಬ ಯುವಕ ಬರೆದಿದ್ದಾನೆ.

ತೂಕ ಇಳಿಸಿ ಅಥವಾ ನಿಮ್ಮ ಗೆಳೆಯನನ್ನು ಮರೆತುಬಿಡಿ: ಟಕ್ಕರ್ ಕೊಟ್ಟ ಯುವಕ

ಹುಡುಗಿಯರ ಗಡ್ಡದಾರಿ ಪ್ರತಿಭಟನೆಗೆ ಎಕ್ಸ್ ಖಾತೆದಾರನೊಬ್ಬ ಟಕ್ಕರ್ ನೀಡಿದ್ದಾನೆ. ತೂಕ ಇಳಿಸಿ ಅಥವಾ ನಿಮ್ಮ ಗೆಳೆಯನನ್ನು ಮರೆತುಬಿಡಿ. ಸ್ಲಿಮ್ ಗೆಳತಿಯನ್ನು ಹೊಂದಬೇಕೆಂಬ ಆಸೆ ಈಗ ನಮ್ಮ ಮನಸ್ಸಿನಲ್ಲಿದೆ. ತೂಕ ಕಡಿಮೆಯಾಗಿಲ್ಲ ಅಂದ್ರೆ ಗೆಳೆಯನಿಲ್ಲ. ತೆಳ್ಳಗಿನ ದೇಹವಿಲ್ಲ, ಪ್ರೀತಿ ಇಲ್ಲ ಎಂಬ ಘೋಷಣೆಯೊಂದಿಗೆ ಪುರುಷರು ಪ್ರತಿಭಟನೆ ನಡೆಸಿದ್ರೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾನೆ. ತರಗತಿಗೆ ಹೋಗದ ವಿದ್ಯಾರ್ಥಿನಿಯರು ಈ ಕೆಲಸ ಮಾಡಿದ್ದು, ಮುಂದಿದೆ ಅವರಿಗೆ ಮಾರಿಹಬ್ಬ ಎಂದು ಮತ್ತೊಂದಿಷ್ಟು ಮಂದಿ ಕಾಲೆಳೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.