ಕೆನಡಾಗೆ ಶಿಫ್ಟ್ ಆಗಬೇಡ ಎಂದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ!
ಆಗ್ನೇಯ ದೆಹಲಿಯ ಬದರ್‌ಪುರ ಪ್ರದೇಶದ ಮೊಲಾರ್‌ಬಂದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಕೆಲಸಕ್ಕಾಗಿ ಕೆನಡಾಕ್ಕೆ ತೆರಳಲು ಅವಕಾಶ ನೀಡದ 50 ವರ್ಷದ ಹೆತ್ತ ತಾಯಿಯನ್ನು ಆಕೆಯ ಮಗನೇ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಆಗ್ನೇಯ ದೆಹಲಿಯ ಬದರ್‌ಪುರ ಪ್ರದೇಶದ ಮೊಲಾರ್‌ಬಂದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 6 ರಂದು ಸಂಜೆ ತನ್ನ ತಾಯಿಯನ್ನು ಕೊಂದ ನಂತರ, ಆರೋಪಿ ಕೃಷ್ಣಕಾಂತ್(31) ತನ್ನ ತಂದೆ ಸುರ್ಜೀತ್ ಸಿಂಗ್(52)ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ.
ಸಿಂಗ್ ಮನೆಗೆ ಬಂದಾಗ ಮಗ ಕೃಷ್ಣಕಾಂತ್ ತನ್ನನ್ನು "ಕ್ಷಮಿಸಿ"ವಂತೆ ಹೇಳಿದ್ದಾನೆ ಮತ್ತು ಮೇಲಕ್ಕೆ ಕರೆದುಕೊಂಡು ಹೋಗಿ ತಾನು ಮಾಡಿದ ಕೃತ್ಯವನ್ನು ತೋರಿಸಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ(ಆಗ್ನೇಯ) ರವಿಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಿಂಗ್ ಮನೆಯ ಮೊದಲ ಮಹಡಿಗೆ ಹೋಗಿ ನೋಡಿದಾಗ, ತನ್ನ ಹೆಂಡತಿ ಗೀತಾ ದೇಹದ ಮೇಲೆ ಅನೇಕ ಇರಿತದ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಈ ವೇಳೆ ಆರೋಪಿ ಮಗ ಓಡಿಹೋದನು ಎಂದು ಅವರು ಹೇಳಿದ್ದಾರೆ.
ಸಿಂಗ್ ತಕ್ಷಣವೇ ಪತ್ನಿ ಗೀತಾಳನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಗ್ ಅವರಿಗೆ ಇಬ್ಬರು ಪುತ್ರರಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ. ಅವರ ಕಿರಿಯ ಮಗ ಸಾಹಿಲ್ ಭೋಲಿ(27) ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣಕಾಂತ್ ನಿರುದ್ಯೋಗಿಯಾಗಿದ್ದು, ಮಾದಕ ವ್ಯಸನಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



