ದೇಶ

ಹೊಟೇಲ್‌ ರೂಂನಲ್ಲಿ ಇಬ್ಬರು ಪ್ರಿಯಕರರ ಜೊತೆ ಸಿಕ್ಕಿಬಿದ್ದ ವೈದ್ಯನ ಪತ್ನಿ; ಹಿಗ್ಗಾಮುಗ್ಗಾ ಥಳಿತ; ವಿಡಿಯೋ ವೈರಲ್!

ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೋಟೆಲ್‌ನಲ್ಲಿ ಆಕ್ಷೇಪಾರ್ಹ ಸನ್ನಿವೇಶದಲ್ಲಿ ತನ್ನ ಇಬ್ಬರು ಪ್ರೇಮಿಗಳೊಂದಿಗೆ ಮೋಜು ಮಾಡುತ್ತಿದ್ದ ಪತ್ನಿಯನ್ನು ವೈದ್ಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಹೊಟೇಲ್‌ ರೂಂನಲ್ಲಿ ಇಬ್ಬರು ಪ್ರಿಯಕರರ ಜೊತೆ ಸಿಕ್ಕಿಬಿದ್ದ ವೈದ್ಯನ ಪತ್ನಿ; ಹಿಗ್ಗಾಮುಗ್ಗಾ ಥಳಿತ; ವಿಡಿಯೋ ವೈರಲ್!
ಮಹಿಳೆಗೆ ಥಳಿತ
Published On :

ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೋಟೆಲ್‌ನಲ್ಲಿ ಆಕ್ಷೇಪಾರ್ಹ ಸನ್ನಿವೇಶದಲ್ಲಿ ತನ್ನ ಇಬ್ಬರು ಪ್ರೇಮಿಗಳೊಂದಿಗೆ ಮೋಜು ಮಾಡುತ್ತಿದ್ದ ಪತ್ನಿಯನ್ನು ವೈದ್ಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆಯ ನಂತರ ವೈದ್ಯ ಪತಿ ಮತ್ತು ಅವರ ಕುಟುಂಬ ಸದಸ್ಯರು ಪತ್ನಿ ಮತ್ತು ಆಕೆಯ ಇಬ್ಬರು ಪ್ರೇಮಿಗಳಿಗೆ ತೀವ್ರವಾಗಿ ಥಳಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಆಕೆಯ ಇಬ್ಬರು ಪ್ರೇಮಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದಿದ್ದಾರೆ. ಶಾಂತಿ ಕದಡುವ ಆರೋಪದ ಮೇಲೆ ಪ್ರೇಮಿಗಳಿಬ್ಬರನ್ನೂ ಜೈಲಿಗೆ ಕಳುಹಿಸಲಾಗಿತ್ತು.

ಕಳೆದ ಎರಡು ವರ್ಷಗಳಿಂದ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ವೈದ್ಯ ತನ್ನ ಪತ್ನಿಯ ಮೇಲೆ ಬಹಳ ದಿನಗಳಿಂದ ಕಣ್ಣಿಟ್ಟದ ಎನ್ನಲಾಗಿದೆ. ಅದರಂತೆ ವೈದ್ಯ ತನ್ನ ವೈದ್ಯ ಪತ್ನಿಯನ್ನು ಇಬ್ಬರು ಪುರುಷರ ಜತೆ ಹೊಟೇಲ್‌ನಲ್ಲಿ ಇರುವಾಗ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾನೆ.

ವೈದ್ಯ ಮಹಿಳೆ ಇಬ್ಬರು ಪುರುಷರ ಜೊತೆ ಹೋಟೆಲ್ ನಲ್ಲಿ ಇರುವ ಮಾಹಿತಿ ತಿಳಿದ ಕೂಡಲೇ ಇಡೀ ಕುಟುಂಬದೊಂದಿಗೆ ಹೋಟೆಲ್‌ಗೆ ತಲುಪಿದ ವೈದ್ಯ ಮೂವರನ್ನೂ ಒಟ್ಟಿಗೆ ಕೋಣೆಯೊಳಗೆ ಹಿಡಿದಿದ್ದು ಅಲ್ಲದೆ ತೀವ್ರವಾಗಿ ಥಳಿಸಿದ್ದಾನೆ. ದಂಪತಿಗೆ 2013ರಲ್ಲಿ ಮದುವೆಯಾಗಿತ್ತು.

ತನ್ನ ಪತ್ನಿಗೆ ಯುವಕರೊಂದಿಗೆ ಸಂಬಂಧ ಇರುವ ಬಗ್ಗೆ ನನ್ನ ಅತ್ತೆಗೆ ವಿವರಿಸಿ ದೂರು ನೀಡಿದರೆ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು. ಸುಮಾರು ಒಂದು ವರ್ಷದ ಹಿಂದೆ ಮಹಿಳೆ ತನ್ನ ಅತ್ತೆಯನ್ನು ಬಿಟ್ಟು ಬೇರೆಡೆ ವಾಸಿಸಲು ಆರಂಭಿಸಿದ್ದಳು. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.