ದೇಶ

ಬಡವರಿಗೆ ಮನೆ ನಿರ್ಮಾಣಕ್ಕೆ ಉಚಿತ ಮರಳು ನೀಡುವುದಾಗಿ ಜಾರ್ಖಂಡ್ ಸಿಎಂ ಘೋಷಣೆ

ಮರಳಿನ ಕೊರತೆಯಿಂದಾಗಿ ಬೆಲೆ ಏರಿಕೆಯ ವಿಷಯವು ಸರ್ಕಾರದ ಗಮನಕ್ಕೆ ಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಡವರಿಗೆ ಮನೆ ನಿರ್ಮಾಣಕ್ಕೆ ಉಚಿತ ಮರಳು ನೀಡುವುದಾಗಿ ಜಾರ್ಖಂಡ್ ಸಿಎಂ ಘೋಷಣೆ
ಹೇಮಂತ್ ಸೊರೆನ್
Published On :

ರಾಂಚಿ: ಜಾರ್ಖಂಡ್‌ನಲ್ಲಿ ಮರಳು ಬಿಕ್ಕಟ್ಟಿನ ಮಧ್ಯೆ, ಮಂಗಳವಾರ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮನೆ ನಿರ್ಮಾಣಕ್ಕಾಗಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುವ ಬಡವರಿಗೆ ಉಚಿತವಾಗಿ ಮರಳು ನೀಡಲಾಗುವುದು ಎಂದು ಘೋಷಿಸಿದರು.

ಜಾರ್ಖಂಡ್ ಅಸೆಂಬ್ಲಿಯಲ್ಲಿ ಮಾತನಾಡಿದ ಸೊರೆನ್, ರಾಜ್ಯಾದ್ಯಂತ ಬಡವರಿಗೆ ಅಬುವಾ ಆವಾಸ್, ಪಿಎಂ ಆವಾಸ್ ಅಥವಾ ವೈಯಕ್ತಿಕ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಮರಳಿನ ಸಮಸ್ಯೆಯನ್ನು ಸದನದಲ್ಲಿ ಪದೇಪದೆ ಪ್ರಸ್ತಾಪಿಸಲಾಗುತ್ತಿದೆ ಮತ್ತು ಮರಳು ಬೆಲೆ ಏರಿಕೆಯ ಭಾರವನ್ನು ಅವರು ಹೊರಬೇಕಾಗಿದೆ ಎಂದರು.

ಮರಳಿನ ಕೊರತೆಯಿಂದಾಗಿ ಬೆಲೆ ಏರಿಕೆಯ ವಿಷಯವು ಸರ್ಕಾರದ ಗಮನಕ್ಕೆ ಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮರಳಿನ ಬೆಲೆಯನ್ನು ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಬಡವರಿಗೆ ಉಚಿತವಾಗಿ ಮರಳು ದೊರೆಯುವಂತೆ ಮಾಡಲಾಗುವುದು ಎಂದು ಸದನಕ್ಕೆ ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಅಬುವಾ ಆವಾಸ್, ಪಿಎಂ ಆವಾಸ್ ಅಥವಾ ವೈಯಕ್ತಿಕವಾಗಿ ತಮ್ಮ ಮನೆಗಳನ್ನು ನಿರ್ಮಿಸುವ ಬಡವರಿಗೆ ಸುಲಭವಾಗಿ ಮರಳು ಸಿಗುತ್ತಿಲ್ಲ ಮತ್ತು ಕೆಲವರು ಹೆಚ್ಚಿನ ಬೆಲೆಗೆ ಮರಳು ಪಡೆಯುತ್ತಿದ್ದಾರೆ. ಇದನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೊರೆನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.