ದೇಶ

ಹರಿದ್ವಾರದಲ್ಲೊಂದು ಆಘಾತಕಾರಿ ಘಟನೆ: 8 ವರ್ಷದ ಮಗನಿಗೆ ಮನ ಬಂದಂತೆ ಥಳಿಸಿದ ತಾಯಿ; ವಿಡಿಯೋ ವೈರಲ್

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ.

ಹರಿದ್ವಾರದಲ್ಲೊಂದು ಆಘಾತಕಾರಿ ಘಟನೆ: 8 ವರ್ಷದ ಮಗನಿಗೆ ಮನ ಬಂದಂತೆ ಥಳಿಸಿದ ತಾಯಿ; ವಿಡಿಯೋ ವೈರಲ್
Published On :

ಹರಿದ್ವಾರ: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ.

ಆಕೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಈ ದುಷ್ಕೃತ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಆತಂಕಕಾರಿ ವೀಡಿಯೊ ತುಣುಕಿನಲ್ಲಿ ಮಹಿಳೆ ತನ್ನ ಮಗನ ಮೇಲೆ ಕುಳಿತು, ಪದೇ ಪದೇ ಆತನ ಬಾಯಿಗೆ, ಕೆನ್ನೆಗೆ ಹೊಡೆಯುವುದು, ಕಚ್ಚುವುದು ಮತ್ತು ಉಸಿರುಗಟ್ಟಿಸುವುದನ್ನು ತೋರಿಸುತ್ತದೆ. ಈ ಸಮಯದಲ್ಲಿ ಆಕೆ ಕೋಪದಿಂದ ತನ್ನ ಮಗನ ತಲೆಯನ್ನು ನೆಲಕ್ಕೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಮಹಿಳೆಯ ಈ ಕೃತ್ಯ ವೈರಲ್ ಆದ ಹಿನ್ನಲೆಯಲ್ಲಿ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತು ತನಿಖೆ ಮುಂದುವರೆದಿರುವುದರಿಂದ ಮಹಿಳೆ ಈಗ ಪೊಲೀಸ್ ವಶದಲ್ಲಿದ್ದಾಳೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.