ದೇಶ

ಕೋವಿಡ್ ರೂಪಾಂತರಿ ಜೆಎನ್​.1: ದೇಶದ 12 ರಾಜ್ಯಗಳಲ್ಲಿ 619 ಪ್ರಕರಣ ಪತ್ತೆ; ಮೊದಲ ಸ್ಥಾನದಲ್ಲಿ ಕರ್ನಾಟಕ!

ಮಹಾಮಾರಿ ಕೊರೋನಾ ವೈರಸ್​ನ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 619ಕ್ಕೆ ಏರಿದೆ.

ಕೋವಿಡ್ ರೂಪಾಂತರಿ ಜೆಎನ್​.1: ದೇಶದ 12 ರಾಜ್ಯಗಳಲ್ಲಿ 619 ಪ್ರಕರಣ ಪತ್ತೆ; ಮೊದಲ ಸ್ಥಾನದಲ್ಲಿ ಕರ್ನಾಟಕ!
ಸಂಗ್ರಹ ಚಿತ್ರ
Published On :

ನವದೆಹಲಿ: ಮಹಾಮಾರಿ ಕೊರೋನಾ ವೈರಸ್​ನ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 619ಕ್ಕೆ ಏರಿದೆ.

ದೇಶದ ಒಟ್ಟು 12 ರಾಜ್ಯಗಳಲ್ಲಿ ( ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣ, ದೆಹಲಿ, ರಾಜಸ್ಥಾನ, ಒಡಿಶಾ, ಹರಿಯಾಣ, ಗುಜರಾತ್) ರೂಪಾಂತರಿ ವೈರಸ್ JN.1 ಪತ್ತೆಯಾಗಿದ್ದು, ಈ ಪೈಕಿ ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಜೆಎನ್‌.1 ವೈರಸ್ ಕರ್ನಾಟಕದಲ್ಲಿ ಇದುವರೆಗೆ 199 ಪ್ರಕರಣಗಳ ಪತ್ತೆಯಾಗಿದ್ದರೆ, ಕೇರಳದಲ್ಲಿ 148, ಮಹಾರಾಷ್ಟ್ರ 110, ಗೋವಾ 47, ಗುಜರಾತ್‌ 36, ಆಂಧ್ರಪ್ರದೇಶ 30, ತಮಿಳುನಾಡಿ 26, ದೆಹಲಿ 15, ರಾಜಸ್ಥಾನ 4, ತೆಲಂಗಾಣ 2, ಒಡಿಶಾ 1 ಮತ್ತು ಹರಿಯಾಣ 1 ಪ್ರಕರಣ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಏತನ್ಮಧ್ಯೆ, ದೇಶದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,423ಕ್ಕೆ ತಲುಪಿದ್ದು, ಮೃತರ ಸಂಖ್ಯೆ 5,33,373ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.