ದೇಶ

ಪಂಜಾಬ್ ಡಿಎಸ್ಪಿ ಹತ್ಯೆ ಪ್ರಕರಣ: ಆಟೋರಿಕ್ಷಾ ಚಾಲಕನ ಬಂಧನ

ಪಂಜಾಬ್ ಸಶಸ್ತ್ರ ಪೊಲೀಸ್ ಪಡೆಯ (ಪಿಎಪಿ) ಡೆಪ್ಯುಟಿ ಸೂಪರಿಂಟೆಂಡೆಂಟ್ ಶವವಾಗಿ ಪತ್ತೆಯಾದ ನಾಲ್ಕು ದಿನಗಳ ನಂತರ, ಆಟೋರಿಕ್ಷಾ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಪಂಜಾಬ್ ಡಿಎಸ್ಪಿ ಹತ್ಯೆ ಪ್ರಕರಣ: ಆಟೋರಿಕ್ಷಾ ಚಾಲಕನ ಬಂಧನ
ಪಂಜಾಬ್ ಪೊಲೀಸ್ ಸಾಂದರ್ಭಿಕ ಚಿತ್ರ
Published On :

ಜಲಂಧರ್‌: ಪಂಜಾಬ್ ಸಶಸ್ತ್ರ ಪೊಲೀಸ್  ಪಡೆಯ (ಪಿಎಪಿ) ಡೆಪ್ಯುಟಿ ಸೂಪರಿಂಟೆಂಡೆಂಟ್ ಶವವಾಗಿ ಪತ್ತೆಯಾದ ನಾಲ್ಕು ದಿನಗಳ ನಂತರ, ಆಟೋರಿಕ್ಷಾ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.  ಆರೋಪಿ ಜಗಳದ ನಂತರ ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ವೇಟ್‌ಲಿಫ್ಟರ್ ಆಗಿದ್ದ ದಲ್ಬೀರ್ ಸಿಂಗ್ (54) ಅವರನ್ನು ಅಧಿಕಾರಿಯ ಸರ್ವೀಸ್ ಪಿಸ್ತೂಲ್‌ನಿಂದ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಸಿಂಗ್ ಅವರ ದೇಹದ ಮೇಲೆ ಗಾಯದ ಗುರುತುಗಳಾಗಿ ಜಲಂಧರ್‌ನ ಬಸ್ತಿ ಬಾವಾ ಖೇಲ್‌ನಲ್ಲಿ ಸೋಮವಾರ ರಸ್ತೆಯ ಮೇಲೆ ಬಿದ್ದಿರುವುದು ಕಂಡುಬಂದಿತ್ತು. ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಮುನ್ನಾದಿನದಂದು ಡಿಎಸ್ಪಿ ಅವರನ್ನು ಆಟೋ ಚಾಲಕ ವಿಜಯ್ ಕುಮಾರ್ ಕಪುರ್ತಲಾದ ಅವರ ಗ್ರಾಮ ಖೋಜೆವಾಲ್‌ಗೆ ಡ್ರಾಪ್ ಮಾಡುವಂತೆ ಹೇಳಿದ ನಂತರ ಈ ಘಟನೆ ನಡೆದಿದೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಸ್ವಪನ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಮಾದಕ ವ್ಯಸನಿ ಎಂದು ಆರೋಪಿಸಲಾದ ಆಟೋ ಚಾಲ ಕುಮಾರ್, ಅಷ್ಟು ದೂರ ಹೋಗಲು ನಿರಾಕರಿಸಿ ಜಗಳವಾಡಿದ್ದಾನೆ, ವಾಗ್ವಾದ ಹೆಚ್ಚಾದಾಗ ಆರೋಪಿ  ಡಿಎಸ್‌ಪಿಯವರ ಸರ್ವೀಸ್ ಪಿಸ್ತೂಲ್ ಹಿಡಿದು ಅಧಿಕಾರಿಯ ಮೇಲೆ ಗುಂಡು ಹಾರಿಸಿರುವುದಾಗಿ ಅವರು ಮಾಹಿತಿ ನೀಡಿದರು. 

ಸಿಂಗ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಗುಂಡಿನ ಗಾಯವನ್ನು ಬಹಿರಂಗಪಡಿಸಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.