ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್ ಗೆ ಶಾಕ್: ಯಾಕೂಬ್'ಗೆ ಸೇರಿದ 31 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ವಶ!
ಉತ್ತರ ಪ್ರದೇಶದ ಮಾಜಿ ಸಚಿವ ಯಾಕೂಬ್ ಖುರೇಷಿ ಅಕ್ರಮವಾಗಿ ಸಂಪಾದಿಸಿದ ಚರ ಮತ್ತು ಸ್ಥಿರ ಆಸ್ತಿಯನ್ನು ಮೀರತ್ ಪೊಲೀಸರು ಜಪ್ತಿ ಮಾಡಿದ್ದು ಜಪ್ತಿ ಮಾಡಿರುವ ಆಸ್ತಿಯ ಮೌಲ್ಯ ಅಂದಾಜು 31 ಕೋಟಿ ರೂಪಾಯಿ ಆಗಿದೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಮಾತನಾಡಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಅನ್ವಯ ಮಾಜಿ ಸಚಿವ ಯಾಕೂಬ್ ಖುರೇಷಿ ಅವರ ಬೇನಾಮಿ ಆಸ್ತಿ 31 ಕೋಟಿ 77 ಸಾವಿರದ 200 ರೂ. ವಶಪಡಿಸಿಕೊಳ್ಳಲಾಗಿದೆ. ಖುರೇಷಿ ಈ ಆಸ್ತಿಯನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಉದ್ಯೋಗಿಗಳ ಹೆಸರಿನಲ್ಲಿ ಖರೀದಿಸಿದ್ದರು.
ಇದರಲ್ಲಿ ಆಸ್ಪತ್ರೆ, ಎರಡು ಐಷಾರಾಮಿ ಕಾರುಗಳು, ಪ್ಲಾಟ್‌ಗಳು ಮತ್ತು ಖುರೇಷಿಯ ಇತರ ಆಸ್ತಿಗಳೂ ಸೇರಿವೆ. ಒಟ್ಟು ಆಸ್ತಿಯಲ್ಲಿ ನೌಚಂಡಿಯ ಭವಾನಿ ನಗರದಲ್ಲಿ ಆಸ್ಪತ್ರೆ ಕಟ್ಟಡ, ಶಾಸ್ತ್ರಿನಗರದಲ್ಲಿ 3265.35 ಚದರ ಮೀಟರ್, 288 ಚದರ ಮೀಟರ್ ಮತ್ತು 213.60 ಚದರ ಮೀಟರ್ ಅಳತೆಯ ಜಮೀನು ಖುರೇಷಿ ತನ್ನ ಸಂಬಂಧಿಕರ ಹೆಸರಿನಲ್ಲಿ ಖರೀದಿಸಿದ ಮತ್ತು ಎರಡು ಐಷಾರಾಮಿ ಕಾರುಗಳನ್ನು ಒಳಗೊಂಡಿದೆ. ಮಾರ್ಚ್ 31, 2022 ರಂದು, ಮೀರತ್‌ನಲ್ಲಿರುವ ಯಾಕೂಬ್ ಖುರೇಷಿಯ ಮಾಂಸ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿದರು. ಅಕ್ರಮವಾಗಿ ತಂದ ಮಾಂಸವನ್ನು ಪ್ಯಾಕಿಂಗ್ ಮಾಡಿದ ಪ್ರಕರಣವನ್ನು ಬೇದಿಸಿದ್ದರು.
ಈ ಸಂದರ್ಭದಲ್ಲಿ ಪೊಲೀಸರು ಕಾರ್ಖಾನೆಯ 10 ಉದ್ಯೋಗಿಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಖುರೇಷಿ, ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ 17 ಮಂದಿಯನ್ನು ಹೆಸರಿಸಲಾಗಿದೆ. ಡಿಸೆಂಬರ್ 2022 ರಲ್ಲಿ, ಖುರೇಷಿ, ಅವರ ಪತ್ನಿ ಶಮ್ಜಿದಾ ಬೇಗಂ, ಮಕ್ಕಳಾದ ಫಿರೋಜ್ ಮತ್ತು ಇಮ್ರಾನ್ ಜೊತೆಗೆ ಕಾರ್ಖಾನೆಯ ವ್ಯವಸ್ಥಾಪಕರಾದ ಮೋಹಿತ್ ತ್ಯಾಗಿ, ಮುಜೀಬ್ ಮತ್ತು ಫೈಜ್ಯಾಬ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಬಿಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಯಾಕೂಬ್ ಖುರೇಷಿ ವಿರುದ್ಧ ಮೀರತ್‌ನ ಖಾರ್ಕೊಂಡಾ ಪೊಲೀಸ್ ಠಾಣೆಯಲ್ಲಿ ದರೋಡೆಕೋರ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಯಾಕೂಬ್ ಖುರೇಷಿ ಕೂಡ ಸೋನಭದ್ರ ಜೈಲಿನಲ್ಲಿದ್ದರು. ಆದರೆ, ದರೋಡೆಕೋರ ಪ್ರಕರಣದಲ್ಲಿ ಬಿಎಸ್ಪಿ ನಾಯಕನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ್ದು, ನ್ಯಾಯಾಲಯ ಜಾಮೀನು ಅರ್ಜಿಯನ್ನು ಸ್ವೀಕರಿಸಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿತ್ತು. ಮಾಂಸ ಕಾರ್ಖಾನೆ ಅಲ್ ಫಹೀಮ್ ಮೀಟೆಕ್ಸ್ ಪ್ರೈವೇಟ್ ಲಿಮಿಟೆಡ್ ಮೇಲೆ ನಡೆದ ದಾಳಿಯಲ್ಲಿ ಮಾಜಿ ಸಚಿವ ಹಾಜಿ ಯಾಕೂಬ್ ಖುರೇಷಿ ಮತ್ತು ಅವರ ಮಕ್ಕಳಾದ ಇಮ್ರಾನ್ ಯಾಕೀಬ್ ಮತ್ತು ಫಿರೋಜ್ ಯಾಕೂಬ್ ಸೇರಿದಂತೆ 17 ಜನರ ವಿರುದ್ಧ ಖಾರ್ಖೋಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


