ಅಸ್ಸಾಂ: 1962ರ ಭಾರತ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆ!
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಲ್ಲಿ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಹೊಗೆ ಬಾಂಬ್ (mortar smoke bomb) ಪತ್ತೆಯಾಗಿದ್ದು, ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಈ ಬಾಂಬ್ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ.

ತೇಜ್‌ಪುರ: ಅಸ್ಸಾಂನಲ್ಲಿ 1962ರ ಭಾರತ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಲ್ಲಿ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಹೊಗೆ ಬಾಂಬ್ (mortar smoke bomb) ಪತ್ತೆಯಾಗಿದ್ದು, ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಈ ಬಾಂಬ್ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಜೌಗಾಪುರ ಗ್ರಾಮದ ವ್ಯಕ್ತಿಯೊಬ್ಬರು ಸೇಸಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ 2 ಇಂಚು ಉದ್ದದ ಸ್ಫೋಟಕವನ್ನು ಪತ್ತೆ ಮಾಡಿದ್ದಾರೆ. ಈ ಪ್ರದೇಶವು ಮಿಸಾಮಾರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಈ ಸ್ಫೋಟಕವನ್ನು ಚೀನಾ ಉತ್ಪಾದಿಸಿದ್ದು, 1962ರ ಯುದ್ಧ ಕಾಲದ್ದು ಎಂದು ಸೋನಿತ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಬರುನ್ ಪುರಕಾಯಸ್ಥ ತಿಳಿಸಿದ್ದಾರೆ.
ಏನಿದು ಹೊಗೆ ಬಾಂಬ್?
ಮಾರ್ಟರ್ ಸ್ಮೋಕ್ ಬಾಂಬ್ ಎನ್ನುವುದು ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಥವಾ ಶತ್ರುಗಳ ಕಣ್ಗಾವಲು ತಪ್ಪಿಸಲು ಹೊಗೆ ಪರದೆಯನ್ನು ರಚಿಸುವಂತಹ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಒಂದು ರೀತಿಯ ಸ್ಫೋಟಕವಾಗಿದೆ. ಇದು ಬಹುಶಃ ಚೀನಾ ನಿರ್ಮಿತ ಬಾಂಬ್ ಆಗಿರಬಹುದು. ಇದೀಗ ಇದನ್ನು ಲೆಫ್ಟಿನೆಂಟ್ ಕರ್ನಲ್ ಅಭಿಜಿತ್ ಮಿಶ್ರಾ ನೇತೃತ್ವದಲ್ಲಿ ಮಿಸಾಮಾರಿ ಶಿಬಿರದ ಸೇನಾ ತಂಡದ ಸಹಾಯದಿಂದ ಇದನ್ನು ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ 1962ರ ಭಾರತ-ಚೀನಾ ಯುದ್ಧ ಅಸ್ಸಾಂನ ನೆರೆ-ಹೊರೆ ರಾಜ್ಯವಾದ ಅರುಣಾಚಲಪ್ರದೇಶದಲ್ಲೂ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



