ಅತ್ಯಾಚಾರ ಯತ್ನ, ಮಗುವನ್ನು ಚರಂಡಿಗೆ ಎಸೆದ ವ್ಯಕ್ತಿ!
ಮಗುವಿನ ಕುಟುಂಬದವರು ಆರೋಪಿಯನ್ನು ಬೆನ್ನಟ್ಟಿದಾಗ ಮಗುವನ್ನು ಆತ ಚರಂಡಿಗೆ ಎಸೆದಿರುವ ಘಟನೆ ಮೀರತ್ ನಲ್ಲಿ ನಡೆದಿದೆ.

ಮುಂಬೈ: 2 ವರ್ಷದ ಮಗುವನ್ನು ವ್ಯಕ್ತಿಯೋರ್ವ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಲು ಯತ್ನಿಸಿ ಚರಂಡಿ ಎಸೆದಿದ್ದಾನೆ. ಮಗುವಿನ ಕುಟುಂಬದವರು ಆರೋಪಿಯನ್ನು ಬೆನ್ನಟ್ಟಿದಾಗ ಮಗುವನ್ನು ಆತ ಚರಂಡಿಗೆ ಎಸೆದಿರುವ ಘಟನೆ ಮೀರತ್ ನಲ್ಲಿ ನಡೆದಿದೆ.
ಬಾಲಕಿಯ ಕುಟುಂಬವು ಆತನನ್ನು ಬೆನ್ನಟ್ಟಲು ಪ್ರಾರಂಭಿಸಿದ ನಂತರ ವ್ಯಕ್ತಿಯೊಬ್ಬ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ 'ಅತ್ಯಾಚಾರ' ಮಾಡಲು ಪ್ರಯತ್ನಿಸಿದನು ಮತ್ತು ಚರಂಡಿಗೆ ಎಸೆದಿದ್ದಾನೆ ಎಂದು ಮೀರತ್‌ನ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಬಾಲಕಿಯ ಶವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸದರ್ ಪ್ರದೇಶದ ತನ್ನ ಮನೆಯ ಹೊರಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಮಲಗಿದ್ದ ಅಪ್ರಾಪ್ತೆಯನ್ನು ಮೋಯಿಶ್ (20) ಅಪಹರಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಕುಟುಂಬಸ್ಥರು ಎಚ್ಚೆತ್ತುಕೊಂಡಾಗ ಬಾಲಕಿಯನ್ನು ಆತನ ಹಿಡಿತದಿಂದ ರಕ್ಷಿಸಲು ಆರೋಪಿಯನ್ನು ಬೆನ್ನಟ್ಟಿದ ಮೊಯಿಶ್ ಬಾಲಕಿಯನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



