ದೆಹಲಿಯ 25 ಅಕ್ರಮ ಬೇಸ್‌ಮೆಂಟ್ ಕೋಚಿಂಗ್ ಸೆಂಟರ್‌ಗಳಿಗೆ MCD ಬೀಗ
ಎಂಸಿಡಿ ಅಧಿಕೃತ ಮಾಹಿತಿಯ ಪ್ರಕಾರ ಜುಲೈ 28 ರಿಂದ ಜುಲೈ 31 ರವರೆಗೆ ನಗರದ ವಿವಿಧ ಭಾಗಗಳಲ್ಲಿರುವ ಕೋಚಿಂಗ್ ಸೆಂಟರ್‌ಗಳು, ಕಚೇರಿಗಳು ಅಥವಾ ಇತರ ವಾಣಿಜ್ಯ ಸಂಸ್ಥೆಗಳಾಗಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 25 ಬೇಸ್‌ಮೆಂಟ್‌ಗಳನ್ನು ಸೀಲ್ ಮಾಡಲಾಗಿದೆ.

ನವದೆಹಲಿ: ದೆಹಲಿಯ ಕೋಚಿಂಗ್ ಸೆಂಟರ್ ನ ಬೇಸ್‌ಮೆಂಟ್ ನಲ್ಲಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ನಂತರ ಎಚ್ಚೆತ್ತುಕೊಂಡಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ), 25 ಅಕ್ರಮ ಬೇಸ್‌ಮೆಂಟ್ ಕೋಚಿಂಗ್ ಸೆಂಟರ್‌ಗಳನ್ನು ಸೀಲ್ ಮಾಡಿದೆ.
ಎಂಸಿಡಿ ಅಧಿಕೃತ ಮಾಹಿತಿಯ ಪ್ರಕಾರ ಜುಲೈ 28 ರಿಂದ ಜುಲೈ 31 ರವರೆಗೆ ನಗರದ ವಿವಿಧ ಭಾಗಗಳಲ್ಲಿರುವ ಕೋಚಿಂಗ್ ಸೆಂಟರ್‌ಗಳು, ಕಚೇರಿಗಳು ಅಥವಾ ಇತರ ವಾಣಿಜ್ಯ ಸಂಸ್ಥೆಗಳಾಗಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 25 ಬೇಸ್‌ಮೆಂಟ್‌ಗಳನ್ನು ಸೀಲ್ ಮಾಡಲಾಗಿದೆ.
ಈ ಅವಧಿಯಲ್ಲಿ 17 ಆಸ್ತಿ ಮಾಲೀಕರಿಗೆ ದೆಹಲಿ ಮಹಾನಗರ ಪಾಲಿಕೆ ಶೋಕಾಸ್ ನೋಟಿಸ್ ನೀಡಿದೆ ಎಂದು ವರದಿ ತಿಳಿಸಿದೆ.
ಮಧ್ಯ ದೆಹಲಿಯ ರಾಜಿಂದರ್ ನಗರ ಮತ್ತು ಪಶ್ಚಿಮ ದೆಹಲಿಯ ಪಟೇಲ್ ನಗರ ಮತ್ತು ರಂಜೀತ್ ನಗರ ಪ್ರದೇಶಗಳಲ್ಲಿನ ಕೋಚಿಂಗ್ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಓಲ್ಡ್ ರಾಜಿಂದರ್ ನಗರವೊಂದರಲ್ಲೇ, ಬಾರಾ ಬಜಾರ್ ಮಾರ್ಗದ ಸ್ಟ್ರೆಚ್‌ನಲ್ಲಿ 18 ಬೇಸ್‌ಮೆಂಟ್‌ಗಳನ್ನು ಸೀಲ್ ಮಾಡಲಾಗಿದೆ.
ಮಾಹಿತಿಯ ಪ್ರಕಾರ. ಈ ಮೂರು ಪ್ರದೇಶಗಳಲ್ಲಿ ಒಟ್ಟು 15 ಆಸ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ಏಳು ಓಲ್ಡ್ ರಾಜಿಂದರ್ ನಗರದಲ್ಲಿವೆ.
ಜುಲೈ 28 ರಿಂದ ಜುಲೈ 31 ರವರೆಗೆ ಸುಮಾರು 185 ಆಸ್ತಿಗಳನ್ನು ಎಂಸಿಡಿ ಸಮೀಕ್ಷೆ ನಡೆಸಿದೆ. ಕಾನೂನಿಗೆ ವಿರುದ್ಧವಾಗಿ ನೆಲಮಾಳಿಗೆಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿದ್ದಕ್ಕಾಗಿ ಸೀಲಿಂಗ್ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



