ಚುನಾವಣಾ ಪ್ರಚಾರಕ್ಕೆ ಆನ್ ಲೈನ್ ಮೂಲಕ ಏರ್ ಟೈಮ್ ವೋಚರ್ ಗಳನ್ನು ನೀಡಲಿರುವ ಚುನಾವಣಾ ಆಯೋಗ
ಸಾರ್ವಜನಿಕ ಪ್ರಸಾರ ಸಂಸ್ಥೆಗಳಾದ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ ಮೂಲಕ ಪ್ರಚಾರ ನಡೆಸುವುದಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಇನ್ನು ಮುಂದೆ ಏರ್ ಟೈಮ್ ವೋಚರ್ ಗಳನ್ನು ನೀಡಲಿದೆ.

ನವದೆಹಲಿ: ಸಾರ್ವಜನಿಕ ಪ್ರಸಾರ ಸಂಸ್ಥೆಗಳಾದ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ ಮೂಲಕ ಪ್ರಚಾರ ನಡೆಸುವುದಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಇನ್ನು ಮುಂದೆ ಏರ್ ಟೈಮ್ ವೋಚರ್ ಗಳನ್ನು ನೀಡಲಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕ ಪ್ರಸಾರ ಸಂಸ್ಥೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಸ್ಲಾಟ್ ಗಳನ್ನು ಆನ್ ಲೈನ್ ಮೂಲಕ ನಿಗದಿಪಡಿಸಲಾಗುತ್ತದೆ ಇದರಿಂದ ಕಾರ್ಯಕ್ಷಮತೆ ಹೆಚ್ಚಳವಾಗಲಿದೆ ಎಂದು ಆಯೋಗ ಮಂಗಳವಾರ ಹೇಳಿದೆ.
ರಾಜಕೀಯ ಪಕ್ಷಗಳು ಸರ್ಕಾರಿ ಸ್ವಾಮ್ಯದ ವಿದ್ಯುನ್ಮಾನ ಮಾಧ್ಯಮದ ಬಳಕೆಗೆ ಇರುವ ಈಗಿನ ಯೋಜನೆಗೆ ಆಯೋಗ ತಿದ್ದುಪಡಿ ತಂದಿದೆ.
ಐಟಿ ವೇದಿಕೆಯ ಮೂಲಕ ಡಿಜಿಟಲ್ ಏರ್ ಟೈಮ್ ವೋಚರ್ ಗಳನ್ನು ನೀಡುವ ಮೂಲಕ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿ ಪರಿಣಾಮವಾಗಿ ಇನ್ನು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಏರ್ ಟೈಮ್ ವೋಚರ್ ಗಳನ್ನು ಪಡೆಯಲು ಪ್ರತಿನಿಧಿಗಳನ್ನು ಆಯೋಗದ ಕಚೇರಿಗೆ ಕಳಿಸಬೇಕಿತ್ತು ಆದರೆ ಇನ್ನು ಮುಂದೆ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


