ದೇಶ

ಕಳೆದ ಬಾರಿಯ ಹಾಗೂ ಮುಂದಿನ ವರ್ಷದ ಜಿ 20 ಶೃಂಗಸಭೆ ಆಯೋಜಕರಿಂದ ಪ್ರಧಾನಿ ಮೋದಿಗೆ ಸಸಿ ಹಸ್ತಾಂತರ!

ಕಳೆದ ವರ್ಷ ಜಿ 20 ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು.

ಕಳೆದ ಬಾರಿಯ ಹಾಗೂ ಮುಂದಿನ ವರ್ಷದ ಜಿ 20 ಶೃಂಗಸಭೆ ಆಯೋಜಕರಿಂದ ಪ್ರಧಾನಿ ಮೋದಿಗೆ ಸಸಿ ಹಸ್ತಾಂತರ!
ಪ್ರಧಾನಿ ಮೋದಿಗೆ ಸಸಿ ನೀಡುತ್ತಿರುವ ಚಿತ್ರ
Published On :

ನವದೆಹಲಿ: ಕಳೆದ ವರ್ಷ ಜಿ 20  ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು. ಜಿ20 ಶೃಂಗಸಭೆಯ ಮೂರನೇ ಅಧಿವೇಶನದ ಆರಂಭದಲ್ಲಿ ಸಾಂಕೇತಿಕ ಸಮಾರಂಭ ನಡೆಯಿತು.

ಮೊದಲು ವಿಡೋಡೋ ಅವರು ಮೋದಿಗೆ ಸಸಿ ಹಸ್ತಾಂತರಿಸಿದರು ಮತ್ತು ನಂತರ ಲುಲಾ ಡ ಸಿಲ್ವಾ ಅವರು ಇತರ ನಾಯಕರ ಚಪ್ಪಾಳೆಗಳ ನಡುವೆ ಪ್ರಧಾನಿಗೆ ಸಸಿಯನ್ನು ನೀಡಿದರು. ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ಹಸ್ತಾಂತರಿಸುವು ದರೊಂದಿಗೆ ಜಿ20 ನಾಯಕರ ಶೃಂಗಸಭೆಯು ಇಂದು ಮಧ್ಯಾಹ್ನ ಮುಕ್ತಾಯಗೊಳ್ಳಲಿದೆ. 

ಜಿ20 ಶೃಂಗಸಭೆಯು ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಮ್ಮತದ ಘೋಷಣೆಯನ್ನು ಅಂಗೀಕರಿಸಿದ ನಂತರ ಭಾರತವು ಶನಿವಾರದಂದು ದೊಡ್ಡ ರಾಜತಾಂತ್ರಿಕ ಗೆಲುವು ಸಾಧಿಸಿದೆ, ಪ್ರಧಾನಿ ಮೋದಿ ಅವರು "ಜಾಗತಿಕ ವಿಶ್ವಾಸದ ಕೊರತೆಯನ್ನು ಕೊನೆಗೊಳಿಸುವಂತೆ ಕರೆ ನೀಡಿದರು. ಆಫ್ರಿಕನ್ ಯೂನಿಯನ್ ನ್ನು ಜಿ 20 ನ ಖಾಯಂ ಸದಸ್ಯರನ್ನಾಗಿ ಸ್ವೀಕರಿಸಲಾಗಿದೆ ಎಂದು ಮೋದಿ ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.