ದೇಶಕಳೆದ ಬಾರಿಯ ಹಾಗೂ ಮುಂದಿನ ವರ್ಷದ ಜಿ 20 ಶೃಂಗಸಭೆ ಆಯೋಜಕರಿಂದ ಪ್ರಧಾನಿ ಮೋದಿಗೆ ಸಸಿ ಹಸ್ತಾಂತರ!
ಕಳೆದ ವರ್ಷ ಜಿ 20 ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು.