ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸಿದಾಗ ಸಾವುಗಳ ಸಂಭವ ಸಹಜ: ನಮೀಬಿಯಾ ರಾಯಭಾರಿ
ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಈ ಮಾತನಾಡಿರುವ ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೊಸ ಪರಿಸರಕ್ಕೆ...

ಕೋಲ್ಕತ್ತಾ: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಈ ಮಾತನಾಡಿರುವ ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸುವಾಗ ಸಾವುಗಳು ಸಾವುಗಳು ಸಹಜವಾಗಿ ಸಂಭವಿಸುತ್ತವೆ ಎಂದು ಹೇಳಿದ್ದಾರೆ.
ಚೀತಾಗಳು ಭಾರತದ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಈ ವರ್ಷದ ಮಾರ್ಚ್‌ನಿಂದ ಎರಡು ದೇಶಗಳಿಂದ ತಂದ 20 ಚಿರತೆಗಳ ಪೈಕಿ ಒಂಬತ್ತು ಚಿರತೆಗಳು ಸಾವನ್ನಪ್ಪಿವೆ. ನೀವು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಪರಿಚಯಿಸುವಾಗ, ಸಾವುನೋವುಗಳಂತಹ ಕೆಲವು ಸವಾಲುಗಳು ಇದ್ದೇ ಇರುತ್ತದೆ. ಇದು ಈ ರೀತಿಯ ಯಾವುದೇ ಯೋಜನೆಯ ಒಂದು ಭಾಗವಾಗಿರುತ್ತದೆ ಎಂದು ಸಿನಿಂಬೊ ಹೇಳಿದರು.
ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದಿದ್ದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಈ ವೇಳೆ ನಮೀಬಿಯಾದಿಂದ ಚೀತಾ 'ಜ್ವಾಲಾ'ಗೆ ನಾಲ್ಕು ಮರಿಗಳು ಜನಿಸಿದವು. ಈ 24 ಚೀತಾಗಳ ಪೈಕಿ ಮೂರು ಮರಿಗಳು ಸೇರಿದಂತೆ ಒಂಬತ್ತು ಸಾವನ್ನಪ್ಪಿವೆ.
ದೊಡ್ಡ ಬೆಕ್ಕು ಜಾತಿಯ ಚೀತಾಗಳನ್ನು ಭಾರತದಲ್ಲಿ ಮತ್ತೆ ಮರುಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ ಒಂದು ವಿನೂತನ ಯೋಜನೆಯಾಗಿದೆ. ಪರಸ್ಪರ ಬೆಂಬಲಿಸುವ ನಮ್ಮ ಸಂಬಂಧವನ್ನು ಗಮನಿಸಿದರೆ ನಮೀಬಿಯಾ ಈ ಉಪಕ್ರಮದಿಂದ ಸಾಕಷ್ಟು ಸಂತಸಗೊಂಡಿದೆ ಎಂದು ಸಿನಿಂಬೊ ಹೇಳಿದರು.
ಆಗಸ್ಟ್ 2ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಒಂಬತ್ತನೆಯ ಚಿರತೆಯ ಕೊನೆಯ ಸಾವು ವರದಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


