ದೇಶ

ಮುಂಬೈನ ಬೀದಿಯಲ್ಲಿ ಅಚ್ಚರಿಯ ಘಟನೆ: ಫ್ಲಿಪ್‌ಕಾರ್ಟ್‌ ಟ್ರಕ್ ನಲ್ಲಿ ಸುರಿದ ಕರೆನ್ಸಿ ನೋಟುಗಳು! ವಿಡಿಯೋ

ವಾಣಿಜ್ಯ ನಗರಿ ಮುಂಬೈನ ಗೇಟ್‌ವೇ ಸೇರಿದಂತೆ ಕೆಲವು ಬೀದಿಗಳಲ್ಲಿ ಶನಿವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲಿಪ್ ಕಾರ್ಟ್ ಟ್ರಕ್ ವೊಂದು ರೂ. 2,000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈನ ಬೀದಿಯಲ್ಲಿ ಅಚ್ಚರಿಯ ಘಟನೆ: ಫ್ಲಿಪ್‌ಕಾರ್ಟ್‌ ಟ್ರಕ್ ನಲ್ಲಿ ಸುರಿದ ಕರೆನ್ಸಿ ನೋಟುಗಳು! ವಿಡಿಯೋ
ಫ್ಲಿಪ್ ಕಾರ್ಟ್ ಟ್ರಕ್ ನಲ್ಲಿ ಹಣ ಚೆಲ್ಲುತ್ತಿರುವ ಚಿತ್ರ
Published On :

ಮುಂಬೈ: ವಾಣಿಜ್ಯ ನಗರಿ ಮುಂಬೈನ ಗೇಟ್‌ವೇ ಸೇರಿದಂತೆ ಕೆಲವು ಬೀದಿಗಳಲ್ಲಿ ಶನಿವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲಿಪ್ ಕಾರ್ಟ್ ಟ್ರಕ್ ವೊಂದು ರೂ. 2,000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಚಲನಚಿತ್ರದ ದೃಶ್ಯದಂತೆ ಕರೆನ್ಸಿ ನೋಟುಗಳು ಗಾಳಿಯಲ್ಲಿ ತೇಲಿಬರುತ್ತಿದ್ದರೆ, ಜನರು ಕುತೂಹಲಭರಿತವಾಗಿ ನೋಡತೊಡಗಿದರು. ಇದೊಂದು ರೀತಿಯ ಉತ್ಸಾಹ ಮತ್ತು ವಿಸ್ಮಯದ ವಾತಾವರಣಕ್ಕೆ ಕಾರಣವಾಯಿತು. ಅಲ್ಲದೇ ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಬಿಡಿ ಪ್ರಚಾರಕ್ಕಾಗಿ ಈ ರೀತಿ ಮಾಡಿತೇ? ಅಥವಾ ಆಕ್ಮಸಿಕವಾಗಿ ಆದ ಘಟನೆಯೇ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ. 

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಫ್ಲಿಪ್ ಕಾರ್ಟ್, ಸದ್ಯದಲ್ಲೇ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದೆ. ಅಂದಹಾಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯಾನ್ ಡೇಸ್ ಸೇಲ್ ಅಭಿಯಾನ ಅಕ್ಟೋಬರ್ 8 ರಿಂದ 15ರವರೆಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.