ಮುಂಬೈ: ಅಪಹರಣಕ್ಕೊಳಗಾದ 6 ವರ್ಷದ ಬಾಲಕಿಯನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದ ಪೊಲೀಸ್ ಶ್ವಾನ!
ಮುಂಬೈ ನಲ್ಲಿ ಅಪಹರಣಕ್ಕೊಳಗಾದ 6 ವರ್ಷದ ಬಾಲಕಿಯನ್ನು ಪೊಲೀಸ್ ಶ್ವಾನವೊಂದು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದೆ.

ಮುಂಬೈ: ಮುಂಬೈ ನಲ್ಲಿ ಅಪಹರಣಕ್ಕೊಳಗಾದ 6 ವರ್ಷದ ಬಾಲಕಿಯನ್ನು ಪೊಲೀಸ್ ಶ್ವಾನವೊಂದು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದೆ.
ಲಿಯೋ, ಡಾಬರ್ ಮ್ಯಾನ್ ತಳಿಯ ಶ್ವಾನ, ಅಪಹರಣಕ್ಕೆ ಒಳಗಾಗಿದ್ದ ಬಾಲಕನನ್ನು ಆತನ ಮನೆಯಿಂದ 500 ಮೀಟರ್ ದೂರವಿದ್ದ ಅಶೋಕ್ ನಗರದ ಸ್ಲಮ್ ನಲ್ಲಿ ಪತ್ತೆ ಮಾಡಿದೆ. ತನ್ನ ಗುಡಿಸಲು ಹೊರಗೆ ಆಟವಾಡುತ್ತಿದ್ದಾಗ ಅಪರಿಚಿತ ವ್ಯಕ್ತಿ ಮಗುವನ್ನು ಅಪಹರಿಸಿದ ನಂತರ ಬಾಲಕನ ಕುಟುಂಬ ಮಧ್ಯರಾತ್ರಿ ವೇಳೆಗೆ ಪೊವೈ ಪೊಲೀಸರನ್ನು ಸಂಪರ್ಕಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊರಗೆ ಕಾಲಿಡುವ ಮುನ್ನ ಬಾಲಕ ಬಟ್ಟೆ ಬದಲಿಸಿದ್ದ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಪೋಲೀಸರು ಲಿಯೋ ಎಂಬ ಶ್ವಾನವನ್ನು ಕರೆತಂದು ಕಾರ್ಯಾಚರಣೆ ಆರಂಭಿಸಿದರು. ಕೇವಲ 90 ನಿಮಿಷಗಳಲ್ಲಿ ಲಿಯೋ ಪೊಲೀಸ್ ತಂಡವನ್ನು ಹುಡುಗನ ಬಳಿಗೆ ಕರೆದೊಯ್ದಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಅಪರಿಚಿತ ಅಪಹರಣಕಾರರು ಭಯಭೀತರಾಗಿ ಬಾಲಕನನ್ನು ಬಿಟ್ಟು ಓಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


