ಮಿಜೋರಾಂ ನಲ್ಲಿ ಶೇ.12.8 ರಷ್ಟು, ಛತ್ತೀಸ್ ಗಢದಲ್ಲಿ 9.9 ರಷ್ಟು ಮತದಾನ
ಮಿಜೋರಾಂ, ಚತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆ ವರೆಗೂ ಅನುಕ್ರಮವಾಗಿ ಶೇ.12.8 ಹಾಗೂ ಶೇ.9.9 ರಷ್ಟು ಮತದಾನವಾಗಿದೆ.

ನವದೆಹಲಿ: ಮಿಜೋರಾಂ, ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆ ವರೆಗೂ ಅನುಕ್ರಮವಾಗಿ ಶೇ.12.8 ಹಾಗೂ ಶೇ.9.9 ರಷ್ಟು ಮತದಾನವಾಗಿದೆ.
30 ವಿಧಾನಸಭಾ ಕ್ಷೇತ್ರಗಳಿರುವ ಮಿಜೊರಾಮ್ ನಲ್ಲಿ ಮಧ್ಯಾಹ್ನ 3 ಗಂಟೆ ವರೆಗೂ ಮತದಾನ ನಡೆಯಲಿದ್ದು, ಡಿ.03 ಕ್ಕೆ ಮತ ಎಣಿಕೆ ನಡೆಯಲಿದೆ.
2018 ರಲ್ಲಿ ಮಿಜೊರಾಮ್ ನಲ್ಲಿ ಶೇ.84.9 ರಷ್ಟು ಮತದಾನವಾಗಿತ್ತು. ಒಟ್ಟು 6,28,608 ಮಂದಿ ಮತದಾನ ಮಾಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಮುನ್ನೆಲೆಯಲ್ಲಿ ಇಲ್ಲದ ರಾಜ್ಯ ಮಿಜೋರಾಮ್ ಆಗಿದೆ.
ಇನ್ನು ಛತ್ತೀಸ್ ಗಢದಲ್ಲಿ ಬೆಳಿಗ್ಗೆ 9 ಗಂಟೆ ವರೆಗೂ ಶೇ.9.93 ರಷ್ಟು ಮತದಾನವಾಗಿದ್ದು, ಉತ್ತರ ಬಸ್ತಾರ್ ಕನ್ಕರ್ ನಲ್ಲಿ ಅತಿ ಹೆಚ್ಚು ಅಂದರೆ ಶೇ.16.48 ರಷ್ಟು ಮತದಾನವಾಗಿದ್ದರೆ, ಕಬೀರ್ ಧಾಮ್ ನಲ್ಲಿ ಶೇ.12.51 ರಷ್ಟು, ದಾಂತೇವಾಡದಲ್ಲಿ ಶೇ.10.18 ರಷ್ಟು, ನಾರಾಯಣಪುರದಲ್ಲಿ ಶೇ.11, ರಾಜ್ ನಂದ್ ಗಾಂವ್ ನಲ್ಲಿ ಶೇ.8.34 ರಷ್ಟು ಮತದಾನವಾಗಿದೆ.
ಖೈರಗಢದಲ್ಲಿ ಶೇ.6, ಬಸ್ತಾರ್ ನಲ್ಲಿ ಶೇ.4.89 ಸುಕ್ಮಾದಲ್ಲಿ ಶೇ.4.21 ರಷ್ಟು, ಕೊಂಡಗಾಂವ್ ನಲ್ಲು ಶೇ.3.39 ರಷ್ಟು ಮತದಾನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


