ಪವಿತ್ರ ಸೆಂಗೋಲ್ ನ್ನು ಕಾಂಗ್ರೆಸ್ 'ನೆಹರೂಗೆ ಕೊಟ್ಟ ಉಡುಗೊರೆ' ಎಂದು ಕರೆದಿದೆ: ಬಿಜೆಪಿ
ಪವಿತ್ರವಾದ ಐತಿಹಾಸಿಕ ರಾಜದಂಡ ಸೆಂಗೋಲ್ ನ್ನು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ ಚಿನ್ನದ ಕೋಲು ಎಂದು ಕರೆದು ಅದನ್ನು ಮ್ಯೂಸಿಯಂನಲ್ಲಿ ಇರಿಸುವ ಮೂಲಕ ಕಾಂಗ್ರೆಸ್ ಹಿಂದೂ ಸಂಪ್ರದಾಯಗಳನ್ನು ಕಡೆಗಣಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.

ನವದೆಹಲಿ: ಪವಿತ್ರವಾದ ಐತಿಹಾಸಿಕ ರಾಜದಂಡ ಸೆಂಗೋಲ್ ನ್ನು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ ಚಿನ್ನದ ಕೋಲು ಎಂದು ಕರೆದು ಅದನ್ನು ಮ್ಯೂಸಿಯಂನಲ್ಲಿ ಇರಿಸುವ ಮೂಲಕ ಕಾಂಗ್ರೆಸ್ ಹಿಂದೂ ಸಂಪ್ರದಾಯಗಳನ್ನು ಕಡೆಗಣಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ಹೊಸ ಸಂಸತ್ತಿನ ಕಟ್ಟಡದಲ್ಲಿ ಸ್ಥಾಪಿಸಲಾಗುವ ರಾಜದಂಡವನ್ನು ಆಗಸ್ಟ್ 1947 ರಲ್ಲಿ ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರವನ್ನು ಸಂಕೇತಿಸಲು ನೆಹರೂರವರಿಗೆ ನೀಡಲಾಗಿತ್ತು. ಇದನ್ನು ಅಲಹಾಬಾದ್ ಮ್ಯೂಸಿಯಂನ ನೆಹರು ಗ್ಯಾಲರಿಯಲ್ಲಿ ಇರಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಈಗ ಲೋಕಸಭೆಯಲ್ಲಿ 'ಸೆಂಗೊಲ್' ನ್ನು ಸ್ಪೀಕರ್ ವೇದಿಕೆಯ ಸಮೀಪದಲ್ಲಿ ಸ್ಥಾಪಿಸಲಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ, ಅದಕ್ಕೆ ಸರಿಯಾದ ಸ್ಥಾನ ನೀಡಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಮತ್ತು ಎಎಪಿ ಸೇರಿದಂತೆ 20 ವಿರೋಧ ಪಕ್ಷಗಳು ಮೇ 28 ರಂದು ಮೋದಿಯಿಂದ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗಿಟ್ಟ ಪ್ರಧಾನಿಯವರ ನಿರ್ಧಾರವು ಘೋರವಾದ ಅವಮಾನ ಮಾತ್ರವಲ್ಲ, ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ನೇರವಾದ ದಾಳಿಯಾಗಿದೆ ಎಂದು ಆರೋಪಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


