ದೇಶ

ಭಾರತ ಈಗಾಗಲೇ ಹಿಂದೂ ರಾಷ್ಟ್ರ, ಅದನ್ನು ಮತ್ತೆ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಅಗತ್ಯವಿಲ್ಲ: ದತ್ತಾತ್ರೇಯ ಹೊಸಬಾಳೆ

ಭಾರತವು ಈಗಾಗಲೇ 'ಹಿಂದೂ ರಾಷ್ಟ್ರ'ವಾಗಿದ್ದು, ಇದು 'ಸಾಂಸ್ಕೃತಿಕ ಪರಿಕಲ್ಪನೆ' ಮತ್ತು ಇದನ್ನು ಸಂವಿಧಾನದ ಮೂಲಕ ಸ್ಥಾಪಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಇಲ್ಲಿ ಹೇಳಿದರು.

ಭಾರತ ಈಗಾಗಲೇ ಹಿಂದೂ ರಾಷ್ಟ್ರ, ಅದನ್ನು ಮತ್ತೆ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಅಗತ್ಯವಿಲ್ಲ: ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ
Published On :

ಸಮಲ್ಖಾ (ಹರಿಯಾಣ): ಭಾರತವು ಈಗಾಗಲೇ 'ಹಿಂದೂ ರಾಷ್ಟ್ರ'ವಾಗಿದ್ದು, ಇದು 'ಸಾಂಸ್ಕೃತಿಕ ಪರಿಕಲ್ಪನೆ' ಮತ್ತು ಇದನ್ನು ಸಂವಿಧಾನದ ಮೂಲಕ ಸ್ಥಾಪಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಇಲ್ಲಿ ಹೇಳಿದರು.

ತಮ್ಮ ಹೇಳಿಕೆಯನ್ನು ವಿವರಿಸಿದ ಅವರು, ರಾಷ್ಟ್ರ ಮತ್ತು ರಾಜ್ಯ ಎರಡು ವಿಭಿನ್ನ ವಿಷಯಗಳು. ರಾಷ್ಟ್ರವು 'ಸಾಂಸ್ಕೃತಿಕ ಪರಿಕಲ್ಪನೆ' ಆಗಿದ್ದರೆ, ರಾಜ್ಯವು ಸಂವಿಧಾನದಿಂದ ಸ್ಥಾಪಿಸಲ್ಪಟ್ಟಿದೆ. ಅದು ರಾಜ್ಯ ಶಕ್ತಿ ಎಂದರು.

'ಹಿಂದೂ ರಾಷ್ಟ್ರದ ಬಗ್ಗೆ ನಾವು ಕಳೆದ 100 ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಅದು ಸಾಂಸ್ಕೃತಿಕ ಪರಿಕಲ್ಪನೆ, ಸೈದ್ಧಾಂತಿಕವಲ್ಲ' ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ರಾಷ್ಟ್ರವು ಒಂದು ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ. ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಅದನ್ನು ಮತ್ತೆ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.