ದೆಹಲಿಯಲ್ಲಿ ಹಾಡಹಗಲಿನಲ್ಲೇ ಕಾರು ಅಡ್ಡಗಟ್ಟಿ 2 ಲಕ್ಷ ರೂ. ದರೋಡೆ: ಐವರು ಆರೋಪಿಗಳ ಬಂಧನ
ಪ್ರಗತಿ ಮೈದಾನದ ಸುರಂಗದೊಳಗೆ ಬಂದೂಕು ತೋರಿಸಿ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರರೊಬ್ಬರಿಂದ 2 ಲಕ್ಷ ರೂಪಾಯಿ ದರೋಡೆ ಮಾಡಿದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.

ದೆಹಲಿ: ಪ್ರಗತಿ ಮೈದಾನದ ಸುರಂಗದೊಳಗೆ ಬಂದೂಕು ತೋರಿಸಿ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರರೊಬ್ಬರಿಂದ 2 ಲಕ್ಷ ರೂಪಾಯಿ ದರೋಡೆ ಮಾಡಿದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಚಾಂದಿನಿ ಚೌಕ್‌ನ ಒಮಿಯಾ ಎಂಟರ್‌ಪ್ರೈಸಸ್‌ನ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರರೊಬ್ಬರು ಹಣವನ್ನು ತಲುಪಿಸಲು ಟ್ಯಾಕ್ಸಿಯಲ್ಲಿ ಗುರುಗ್ರಾಮದ ಕಡೆಗೆ ಹೋಗುತ್ತಿದ್ದಾಗ ದರೋಡೆಕೋರರು 2 ಲಕ್ಷ ರೂ.ಗಳನ್ನು ದೋಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಅಳವಡಿಸಲಾಗಿರುವ 350ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದು, ದರೋಡೆ ನಡೆಸಿದ ನಂತರ ದುಷ್ಕರ್ಮಿಗಳು ಯಾವ ಮಾರ್ಗವನ್ನು ಅನುಸರಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಘಟನೆಯನ್ನು ಸಿಸಿಟಿವಿ ಕ್ಯಾಮೆರಾಗಳು ಸ್ಪಷ್ಟವಾಗಿ ಸೆರೆಹಿಡಿದಿದ್ದರೂ, ಅವರು ಹೆಲ್ಮೆಟ್ ಧರಿಸಿದ್ದರಿಂದ ಮೋಟಾರ್‌ಸೈಕಲ್‌ನಲ್ಲಿ ಬಂದ ದರೋಡೆಕೋರರ ಮುಖವನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿ ದರೋಡೆ: ಎಲ್ಜಿ ರಾಜೀನಾಮೆಗೆ ಸಿಎಂ ಕೇಜ್ರಿವಾಲ್ ಪಟ್ಟು
ಘಟನೆಯ 22 ಸೆಕೆಂಡುಗಳ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ನಾಲ್ವರು ಎರಡು ಮೋಟಾರ್‌ಸೈಕಲ್‌ಗಳಲ್ಲಿ ಟ್ಯಾಕ್ಸಿಯನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ. ಟ್ಯಾಕ್ಸಿಯನ್ನು ನಿಲ್ಲಿಸುತ್ತಿದ್ದಂತೆ, ಎರಡೂ ಬೈಕ್‌ನಲ್ಲಿದ್ದ ಹಿಂಬದಿ ಸವಾರರಿಬ್ಬರು ಕೆಳಗಿಳಿದ್ದಾರೆ. ಒಬ್ಬರು ಚಾಲಕನ ಸೀಟಿನ ಕಡೆಗೆ ತೆರಳಿದರೆ, ಮತ್ತೋರ್ವ ಕಾರಿನ ಹಿಂದಿನ ಬಾಗಿಲಿನತ್ತ ತೆರಳಿದ್ದಾನೆ.
ಇಬ್ಬರೂ ಪಿಸ್ತೂಲ್ ತೋರಿಸಿ, ಹಣವನ್ನು ದೋಚಿದ್ದಾರೆ. ನಂತರ ನಾಲ್ವರು ತಮ್ಮ ಬೈಕ್‌ಗಳನ್ನೇರಿ ಹೊರಟಿದ್ದಾರೆ. ಈ ವೇಳೆ ನಾಲ್ವರೂ ಹೆಲ್ಮೆಟ್ ಧರಿಸಿದ್ದರು. ದೆಹಲಿಯನ್ನು ಸರಾಯ್ ಕಾಲೆ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುವ 1.5 ಕಿಮೀ ಸುರಂಗದೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 397 (ದರೋಡೆ ಅಥವಾ ಡಕಾಯಿತಿ, ಸಾವು ಅಥವಾ ಘೋರವಾದ ಗಾಯ ಉಂಟುಮಾಡುವ ಪ್ರಯತ್ನ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


