ನಟ ಸೂರ್ಯ ಹುಟ್ಟುಹಬ್ಬ: ಬ್ಯಾನರ್ ಹಾಕುವಾಗ ವಿದ್ಯುತ್ ಹರಿದು ಇಬ್ಬರು ಯುವಕರ ಸಾವು
ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಆಂಧ್ರಪ್ರದೇಶ: ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಟಾಲಿವುಡ್ ಖ್ಯಾತ ನಟ ಸೂರ್ಯ ಅವರ ಹುಟ್ಟುಹಬ್ಬವಿತ್ತು. ಅದರಂತೆ ಅಭಿಮಾನಿಗಳಿಬ್ಬರು ಸೂರ್ಯನ ಹುಟ್ಟುಹಬ್ಬದ ಸಲುವಾಗಿ ಬ್ಯಾನರ್ ಅಳವಡಿಸುವಾಗ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮೋಪುಲವಾರಿಪಾಲೆಂಬ ಗ್ರಾಮದ ನರಸರಾವ್ಪೇಟೆ ಮಂಡಲದ ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಮತ್ತೋರ್ವ ಪುನೀತ್ ಅಭಿಮಾನಿ ಸಾವು
ಪೊಲೀಸರ ಪ್ರಕಾರ ನಟ ಸೂರ್ಯ ಬರ್ತ್ಡೇ ಅಂಗವಾಗಿ ಬ್ಯಾನರ್ ಅಳವಡಿಸುವಾಗ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದ ರಾಡ್ ತಂತಿಗೆ ತಗುಲಿದಾಗ ಶಾಕ್ ಹೊಡೆದಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ವೆಂಕಟೇಶ್ ಮತ್ತು ಸಾಯಿ ಇಬ್ಬರು ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಇಬ್ಬರ ಸಾವಿಗೆ ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಪೊಲೂರು ಸಾಯಿ ಸಹೋದರಿ ಅನನ್ಯಾ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


