ವಿದೇಶಿ ಮಹಿಳೆಗೆ ಲೈವ್ ನಲ್ಲೇ ಲೈಂಗಿಕ ಕಿರುಕುಳ; ಎಲ್ಲೆಂದರಲ್ಲಿ ಮುಟ್ಟಿದ ವ್ಯಕ್ತಿ; ಪೊಲೀಸರಿಂದ ತೀವ್ರ ಶೋಧ; ವಿಡಿಯೋ ವೈರಲ್
ಜೈಪುರದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳಾ ಪ್ರವಾಸಿಗೆ ಲೈಂಗಿಕ ಕುರುಕುಳ ನೀಡಿದ್ದು, ಲೈವ್ ವೀಡಿಯೋ ಮಾಡುವಾಗಲೇ ವಿದೇಶಿ ಮಹಿಳೆಯ ಮೈಮುಟ್ಟಿ ಕಿರುಕುಳ ನೀಡಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ಜೈಪುರ: ಜೈಪುರದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳಾ ಪ್ರವಾಸಿಗೆ ಲೈಂಗಿಕ ಕುರುಕುಳ ನೀಡಿದ್ದು, ಲೈವ್ ವೀಡಿಯೋ ಮಾಡುವಾಗಲೇ ವಿದೇಶಿ ಮಹಿಳೆಯ ಮೈಮುಟ್ಟಿ ಕಿರುಕುಳ ನೀಡಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ರಾಜಸ್ಥಾನದಲ್ಲಿ ವಿದೇಶಿ ಮಹಿಳಾ ಪ್ರವಾಸಿಯನ್ನು ಅನುಚಿತವಾಗಿ ಸ್ಪರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಯಾವಾಗ ಎಂಬುದು ಇನ್ನೂ ದೃಢಪಟ್ಟಿಲ್ಲ. ವಿಡಿಯೋದಲ್ಲಿ ಮಹಿಳಾ ಪ್ರವಾಸಿ ಹಾಗೂ ಅವರ ಸಂಗಾತಿ ಮತ್ತು ಸ್ಥಳೀಯ ವ್ಯಕ್ತಿಯೊಬ್ಬ ಪ್ರವಾಸಿ ಮಹಿಳೆ ಜತೆ ಪದೇ ಪದೇ ಅಸಭ್ಯವಾಗಿ ಸ್ಪರ್ಶ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಮಹಿಳಾ ಪ್ರವಾಸಿ ಈ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು "ಸುಂದರ" ಮತ್ತು "ಧನ್ಯವಾದ" ಪದಗಳನ್ನು ಬಳಸುತ್ತಿದ್ದರೂ ಆತ ಮಾತ್ರ ಅದನ್ನು ಲೆಕ್ಕಿಸದೇ ಮಹಿಳೆಯನ್ನು ಸ್ಪರ್ಶಿಸುತ್ತಲೇ ನಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ನೋಡಲು 40ರ ಆಸುಪಾಸಿನಲ್ಲಿರುವಂತೆ ಕಾಣುತ್ತಿರುವ ವ್ಯಕ್ತಿ ಮಹಿಳೆಯ ಭುಜ-ಎದೆ ಮೇಲೆ ಕೈ ಹಾಕುವ ಮೊದಲು " ಇಟ್ಸ್ ಮೈ ಪ್ಲಸರ್’’ ಎಂದು ಹೇಳುತ್ತಿದ್ದಾನೆ. ಹಾಗೆ ಸಂತೋಷ ಎನ್ನುತ್ತಲೇ ಮತ್ತೊಂದು ಕಡೆಯಿಂದ ಮಹಿಳಾ ಪ್ರವಾಸಿಯ ಇನ್ನೊಂದು ತೋಳನ್ನು ಹಿಡಿಯುತ್ತಾನೆ. ಒಂದು ಕ್ಷಣದಲ್ಲಿ ಅವರ ದೇಹದ ಇತರ ಭಾಗಗಳನ್ನು ಸ್ಪರ್ಶಿಸುವ ಯತ್ನ ಮಾಡುತ್ತಾನೆ. ಈ ವಿಡಿಯೋಗೆ ಟ್ವೀಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರ ಆಕ್ರೋಶ
ಈ ವಿಡಿಯೋವನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಮತ್ತು ರಾಜಸ್ಥಾನ ಪೊಲೀಸರು ಈ ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಮಲಿವಾಲ್, "ಈ ವ್ಯಕ್ತಿ ವಿದೇಶಿ ಪ್ರವಾಸಿಗರನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವ ವಿಡಿಯೋವನ್ನು ನೋಡಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸರು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಸಂಡೇಬಜಾರ್ ನಲ್ಲಿ ವಿದೇಶಿ ಯೂಟ್ಯೂಬರ್ ಗೆ ಕಿರುಕುಳ; ವಿಡಿಯೋ ವೈರಲ್, ಡಿಸಿಪಿ ಗಮನಕ್ಕೆ ಪ್ರಕರಣ, ಆರೋಪಿ ಬಂಧನ!
ವಿಡಿಯೋದಲ್ಲಿರುವ ವ್ಯಕ್ತಿಗೆ ಪೊಲೀಸರ ಹುಡುಕಾಟ
ಈ ಬಗ್ಗೆ ಯಾರಿಂದಲೂ ಔಪಚಾರಿಕ ದೂರು ದಾಖಲಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುವುದನ್ನು ಸಂಬಂಧಪಟ್ಟ ಪೊಲೀಸ್ ಠಾಣೆ ಗಮನಕ್ಕೆ ತಂದಿದೆ. "ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಡಿಯೋವನ್ನು ಹಂಚಿಕೊಂಡಾಗಿನಿಂದ, ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಈ ಬಗ್ಗೆ ಕಮೆಂಟ್ ಮಾಡಿರುವ ಬಳಕೆದಾರರು, "ಅಸಹ್ಯಕರ ನಡವಳಿಕೆ. ಈ ವ್ಯಕ್ತಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರ "ಮಹಿಳೆಯರಿಗೆ ಸ್ವಲ್ಪ ಗೌರವವನ್ನು ತೋರಿಸು." ಎಂದು ಸಿಟ್ಟು ಹೊರ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


