'ಬೇಡಿಕೊಂಡರು ಸಿಗದ ರಜೆ': ಎರಡೂವರೆ ವರ್ಷದ ಮಗನ ಶವವನ್ನು ಎಸ್ ಪಿ ಕಚೇರಿಗೆ ಹೊತ್ತೊಯ್ದ ಪೊಲೀಸ್ ಪೇದೆ!
ರಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತನ್ನ ಎರಡುವರೆ ವರ್ಷದ ಮಗುವಿನ ಶವವನ್ನು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ಫತ್ತರ ಪ್ರದೇಶದ ಈತ್ವಾ ಜಿಲ್ಲೆಯಲ್ಲಿ ನಡೆದಿದೆ.

ಲಕ್ನೋ: ರಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತನ್ನ ಎರಡುವರೆ ವರ್ಷದ ಮಗುವಿನ ಶವವನ್ನು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ಉತ್ತರ ಪ್ರದೇಶದ ಈತ್ವಾ ಜಿಲ್ಲೆಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಮತ್ತು ಎರಡು ಮಕ್ಕಳನ್ನು ನೋಡಿಕೊಳ್ಳಲು ತನಗೆ ರಜೆ ನೀಡುತ್ತಿಲ್ಲ ಎಂದು ಪೊಲೀಸ್ ಪೇದೆ ಸೋನು ಆರೋಪಿಸಿದ್ದಾರೆ.
ಕಳೆದ ವಾರ ಅಂದರೆ ಜನವರಿ 7 ರಂದು ಸೋನು ಚೌಧರಿ, ಇಟವಾ ನಗರ ಎಸ್ ಪಿ ಕಪಿಲ್ ದೇವ್ ಅವರ ಕಚೇರಿಗೆ ರಜೆ ಕೋರಿ ಅರ್ಜಿ ಸಲ್ಲಿಸದ್ದರು, ಆದರೆ ಅವರಿಗೆ ರಜೆ ಸಿಗಲಿಲ್ಲ, ಬದಲಿಗೆ ಅವರನ್ನು ಕ್ವಿಕ್ ರೆಸ್ಪಾನ್ಸ್ ಟೀಮ್ ಗೆ ಪೋಸ್ಟ್ ಮಾಡಲಾಯಿತು. ತಾನು ಹೆಚ್ಚಿನ ಸಮಯ ಕೆಲಸದಲ್ಲೇ ತೊಡಗಿಕೊಂಡಿರುವುದರಿಂದ ತನ್ನ ಮಗನ ಮರಣ ಉಂಟಾಯಿತು ಎಂದು ಸೋನು ಚೌಧರಿ ಹೇಳಿದ್ದಾರೆ.
ಸೋನು ಬುಧವಾರ ಕರ್ತವ್ಯಕ್ಕೆ ಹೊರಡಲು ತಯಾರಾಗುತ್ತಿದ್ದಾಗ, ಅವರ ಇಬ್ಬರು ಮಕ್ಕಳಾದ ಶಿವೇಂದ್ರ, ಮತ್ತು ಗೋಲು, ಮನೆಯಿಂದ ನುಸುಳಿಕೊಂಡು ಪಕ್ಕದ ಪ್ಲಾಟ್‌ಗೆ ಆಟವಾಡಲು ಹೋಗಿದ್ದರು.
ಸೋನು ಪತ್ನಿ ಕವಿತಾ ಇತ್ತೀಚಿಗೆ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆ ಹಿಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಶಿವೇಂದ್ರ ವಾಪಸಾದರೂ ಗೋಲು ಮನೆಗೆ ಬಂದಿರಲಿಲ್ಲ. ನಂತರ ಸೋನು ಗೋಲು ಹುಡುಕಲು ಹೊರಟಾಗ ಪಕ್ಕದ ಪ್ಲಾಟ್‌ನಲ್ಲಿ ಚರಂಡಿ ನೀರಿನಿಂದ ತುಂಬಿದ ಗುಂಡಿಯಲ್ಲಿ ಆತನ ಶವ ತೇಲುತ್ತಿರುವುದು ಕಂಡು ಬಂತು.
ಕೂಡಲೇ ಗೋಲುನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಗೋಲು ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದರು. ಹಾಸಿಗೆ ಹಿಡಿದ ಪತ್ನಿಯೊಂದಿಗೆ ತನ್ನ ಇಬ್ಬರು ಪುತ್ರರನ್ನು ನೋಡಿಕೊಳ್ಳಲು ರಜೆಕೋರಿದ್ದರು ಹಿರಿಯ ಅಧಿಕಾರಿಗಳು ರಜೆ ನೀಡಲಿಲ್ಲ ಎಂದು ಸೋನು ಆಕ್ರೋಶಗೊಂಡು ತನ್ನ ಮಗನ ದೇಹವನ್ನು ಎಸ್‌ಎಸ್‌ಪಿ ಕಚೇರಿಗೆ ಕೊಂಡೊಯ್ದರು.
ಅಧಿಕಾರಿಗಳು ಪೇದೆ ಸೋನು ಚೌಧರಿಗೆ ಸಾಂತ್ವನ ಹೇಳಿ ಏಕತಾ ಕಾಲೋನಿಯಲ್ಲಿರುವ ಅವರ ಮನೆಗೆ ಮರಳುವಂತೆ ಮನವೊಲಿಸಿದರು. ಏಕತಾ ಕಾಲೋನಿಯಲ್ಲಿ 2 ಕೊಠಡಿಗಳ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಚೌಧರಿ ಅವರನ್ನು ಅವರ ಮನೆಗೆ ಕರೆದೊಯ್ದ ಇತರ ಅಧಿಕಾರಿಗಳು, ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಎಸ್‌ಎಸ್‌ಪಿ ಇಟಾವಾಹ್ ಜೈ ಪ್ರಕಾಶ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


