ಸರ್ಕಾರಕ್ಕೆ 10 ಭಯೋತ್ಪಾದಕರ ಖಾತೆಗಳ ವರದಿ ನೀಡಲು ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ
ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕರೆಂದು ಘೋಷಿಸಿರುವ 10 ಮಂದಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಸರ್ಕಾರಕ್ಕೆ ನೀಡುವಂತೆ ಎಲ್ಲಾ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.

ಮುಂಬೈ: ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕರೆಂದು ಘೋಷಿಸಿರುವ 10 ಮಂದಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಸರ್ಕಾರಕ್ಕೆ ನೀಡುವಂತೆ ಎಲ್ಲಾ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಅ.04 ರಂದು ಗೃಹ ಸಚಿವಾಲಯ ಹಿಜ್ಬುಲ್ ಮುಜಾಹಿದ್ದೀನ್ (ಹೆಚ್ಎಂ), ಲಷ್ಕರ್-ಎ-ತೈಯ್ಬಾ (ಎಲ್ಇಟಿ) ಹಾಗೂ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ 10 ಮಂದಿಯನ್ನು ಯುಎಪಿಎ ಕಾಯ್ದೆಯಡಿ ಭಯೋತ್ಪಾದಕರೆಂದು ಘೋಷಿಸಿತ್ತು.
ಇದನ್ನೂ ಓದಿ: NRI ಗಳು ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ಯಾವುದೇ ಬಿಲ್ ಪಾವತಿಸಬಹುದು: ಆರ್ ಬಿಐ
ಹಿಬುಬುಲ್ಲಾ ಮಲೀಕ್ ಅಲಿಯಾಸ್ ಸಾಜಿದ್ ಜುಟ್ (ಪಾಕಿಸ್ತಾನಿ ಪ್ರಜೆ) ಬಸಿತ್ ಅಹ್ಮದ್ ರೇಷಿ (ಜಮ್ಮು-ಕಾಶ್ಮೀರದ ಬಾರಾಮುಲ್ಲಾ ನಿವಾಸಿ, ಆದರೆ ಪಾಕ್ ನಲ್ಲಿ ವಾಸ) ಜಮ್ಮು-ಕಾಶ್ಮೀರದ ಇಮ್ತಿಯಾಜ್ ಅಹ್ಮದ್ ಕಂಡೂ ಅಲಿಯಾಸ್ ಸಜಾದ್, ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಂ, ಶೇಖ್ ಜಮೀಲ್-ಉರ್-ರೆಹಮಾನ್ ಅಲಿಯಾಸ್ ಶೇಖ್ ಸಾಹಬ್ ಎಂಬುವವರನ್ನು ಭಯೋತ್ಪಾದಕರೆಂದು ಘೋಷಿಸಲಾಗಿದೆ.
ಹಬೀಬುಲ್ಲಾ ಮಲೀಕ್ ಎಂಬಾತ ಭಯೋತ್ಪಾದಕರಲ್ಲಿ ಪ್ರಮುಖನಾಗಿದ್ದು, ಪೂಂಛ್ ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದವನಾಗಿದ್ದಾನೆ.
ಕೆವೈಸಿಯ ಆಧಾರದಲ್ಲಿ ಆರ್ ಬಿಐ ನ ಮಾಸ್ಟರ್ ನಿರ್ದೇಶನದ ಪ್ರಕಾರ, ಈ ವ್ಯಕ್ತಿಗಳನ್ನು ಹೋಲುವ ಯಾವುದೇ ವ್ಯಕ್ತಿಗಳ ಬ್ಯಾಂಕ್ ಖಾತೆ ವಿವರಗಳನ್ನು ಗೃಹ ಸಚಿವಾಲಯದೊಂದಿಗೆ ಹಂಚಿಕೊಳ್ಳಬೇಕೆಂಬ ನಿರ್ದೇಶನ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


