ಶ್ರದ್ಧಾ ವಾಕರ್ ಹತ್ಯೆ ಕೇಸ್: ಆಫ್ತಾಬ್ ವಾಸಿಸುತ್ತಿದ್ದ ಪ್ಲಾಟ್ ನಿಂದ 5 ಚಾಕುಗಳು ಪೊಲೀಸರ ವಶಕ್ಕೆ, ಎಫ್ ಎಸ್ ಎಲ್ ಗೆ ರವಾನೆ
ತನ್ನ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಶ್ರದ್ಧಾ ವಾಕರ್ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪ ಹೊತ್ತಿರುವ ಆಫ್ತಾಬ್ ಅಮೀನ್ ಪೂನಾವಾಲಾ ವಾಸಿಸುತ್ತಿದ್ದ ಛತ್ತರ್ಪುರದ ಪ್ಲಾಟ್ ನಿಂದ ದೆಹಲಿ ಪೊಲೀಸರು ಐದು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.

ನವದೆಹಲಿ: ತನ್ನ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಶ್ರದ್ಧಾ ವಾಕರ್ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪ ಹೊತ್ತಿರುವ ಆಫ್ತಾಬ್ ಅಮೀನ್ ಪೂನಾವಾಲಾ ವಾಸಿಸುತ್ತಿದ್ದ ಛತ್ತರ್ಪುರದ ಪ್ಲಾಟ್ ನಿಂದ ದೆಹಲಿ ಪೊಲೀಸರು ಐದು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಫ್ತಾಬ್ ನನ್ನನ್ನು ಕೊಂದು ತುಂಡು ಮಾಡಿ ಎಸೆಯುತ್ತಾನೆ': 2020ರಲ್ಲಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದ ಶ್ರದ್ಧಾ ವಾಲ್ಕರ್
ಆದರೆ ಆಕೆಯ ದೇಹವನ್ನು ಕತ್ತರಿಸಲು ಬಳಸಿದ ಚಾಕು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ಪಡೆಯಲಾದ ಚಾಕುಗಳನ್ನು ಕೊಲೆ ಮಾಡುವುದಕ್ಕೆ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಒಂದು ವೇಳೆ ಈ ಚಾಕುಗಳನ್ನು ಕೊಲೆ ಮಾಡುವುದಕ್ಕೆ ಬಳಸಲಾಗಿದೆಯೇ ಎಂಬುದು ವಿಧಿ ವಿಜ್ಞಾನ ಪರೀಕ್ಷೆಯ ನಂತರವೇ ಖಚಿತವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


