ಮಾಂಸಾಹಾರ ನಿಷೇಧವಲ್ಲ, ಆದ್ರೆ ಗೋಮಾಂಸ ತಿನ್ನಬೇಡಿ- ಆರ್ ಎಸ್ ಎಸ್ ಮುಖಂಡ
ಮಾಂಸಾಹಾರ ನಿಷೇಧವಲ್ಲ, ಅದನ್ನು ದೇಶದಲ್ಲಿ ನಿರ್ಬಂಧಿಸಲು ಸಾಧ್ಯವಿಲ್ಲ, ಆದರೆ, ಗೋಮಾಂಸವನ್ನು ತಿನ್ನಬೇಡಿ ಎಂದು ಹಿರಿಯ ರಾಷ್ಟ್ರೀಯ ಸ್ವಯಂ ಸೇವಕ ಪದಾಧಿಕಾರಿ ಜೆ ನಂದಕುಮಾರ್ ಬುಧವಾರ ಹೇಳಿದ್ದಾರೆ.

ನವದೆಹಲಿ: ಮಾಂಸಾಹಾರ ನಿಷೇಧವಲ್ಲ, ಅದನ್ನು ದೇಶದಲ್ಲಿ ನಿರ್ಬಂಧಿಸಲು ಸಾಧ್ಯವಿಲ್ಲ, ಆದರೆ, ಗೋಮಾಂಸವನ್ನು ತಿನ್ನಬೇಡಿ ಎಂದು ಹಿರಿಯ ರಾಷ್ಟ್ರೀಯ ಸ್ವಯಂ ಸೇವಕ ಪದಾಧಿಕಾರಿ ಜೆ ನಂದಕುಮಾರ್ ಬುಧವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಆರ್ ಎಸ್ ಎಸ್ ಚಿಂತಕರ ವಿಭಾಗ ಪ್ರಜ್ಞಾ ಪ್ರವಾಹದ ಮುಖ್ಯಸ್ಥ ಕುಮಾರ್, ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ. ಆರ್ ಎಸ್ ಎಸ್ ಅಭಿಪ್ರಾಯವಲ್ಲಾ ಎಂದರು.
ದೇಶದಲ್ಲಿನ ವಿವಿಧ ಆಹಾರ ಪದ್ಧತಿಗಳ ಮೇಲೆ ಆರ್ ಎಸ್ ಎಸ್ ಮತ್ತಿತರ ಸಂಘಟನೆಗಳ ತಮ್ಮ ಆಯ್ಕೆಗಳನ್ನು ಜನರ ಮೇಲೆ ಹೇರುತ್ತಿವೆ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮಾಂಸಾಹಾರ ನಿಷೇಧವಲ್ಲಾ, ಅದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದರು.
ಗುವಾಹಟಿಯಲ್ಲಿ ಸೆಪ್ಟೆಂಬರ್ 20 ರಿಂದ ಮೂರು ದಿನಗಳ 'ಲೋಕಮಂಥನ್' ಚಿಂತಕರ ಸಮಾವೇಶವನ್ನು ಆರ್ ಎಸ್ ಎಸ್ ಮತ್ತಿತರ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


